23ರಂದು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
Published Date: 20-Mar-2024 Link-Copied
ಮಂಗಳೂರು,ಮಾ, 19: ದಕ್ಷಿಣ ಕನ್ನಡ ಜಿಲ್ಲಾ 26ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.23, 24ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ದ.ಕ. ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಹೇಳಿದರು. ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ.23ರಂದು 8.45ಕ್ಕೆ ವಿವಿ ಕಾಲೇಜಿನಿಂದ ಪುರಭವನಕ್ಕೆ ಕನ್ನಡ ಭುವನೇಶ್ವರಿಯ ಮೆರವಣಿಗೆ ಬಳಿಕ 9.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಷಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಭುವನೇಶ್ವರಿ ಹೆಗಡೆ ಸಮ್ಮೇಳನಾಧ್ಯಕ್ಷರಾಗಿರುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಹೇಮಾವತಿ ವಿ. ಹೆಗ್ಗಡೆ ಉಪಸ್ಥಿತರಿರುವರು. ಮಂಗಳೂರು ವಿವಿ ಕುಲಪತಿ ಪಿ.ಎಲ್. ಧರ್ಮ ಪ್ರದರ್ಶನ ಮಳಿಗೆ ಉದ್ಘಾಟಿಸುವರು ಎಂದರು. ಮಧ್ಯಾಹ್ನ 11.30ರಿಂದ 11.45ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, 11.45 ರಿಂದ ಕರಾವಳಿಯ ಸಾಹಿತ್ಯ ಪರಂಪರೆಯ ಅವಲೋಕನ ಗೋಷ್ಠಿ, ಮಧ್ಯಾಹ್ನ 2ರಿಂದ ಬಹುಭಾಷಾ ಕವಿಗೋಷ್ಠಿ, ಮಧ್ಯಾಹ್ನ 3ರಿಂದ ಹಾಸಭಾಸ-ನಗೆ ಗೋಷ್ಠಿ, ಸಂಜೆ 4ರಿಂದ ಕರ್ನಾಟಕ ಸುವರ್ಣ ಸಂಭ್ರಮ-ದ.ಕ. ಜಿಲ್ಲೆಯಲ್ಲಿ ಕನ್ನಡದ ಅಸ್ಮಿತೆ ವಿಶೇಷ ಉಪನ್ಯಾಸ, 4.30ರಿಂದ ಜಾನಪದ ಗಾಯನ ಹಾಗೂ ನೃತ್ಯ ವೈವಿಧ್ಯ, ಸಂಜೆ 5ರಿಂದ ಅಗಲಿದ ಗಣ್ಯರಿಗೆ ನುಡಿನಮನ, 5.30ರಿಂದ ಸಪ್ತಮಾತೃಕೆಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು. ಮಾ.24ರಂದು ಬೆಳಗ್ಗೆ 8ರಿಂದ ಉದಯರಾಗ, 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 9ರಿಂದ ಯುವ ಕವಿಗೋಷ್ಠಿ ನಡೆಯಲಿದೆ. 10ರಿಂದ ವಿಶೇಷ ಉಪನ್ಯಾಸ, 10.30ರಿಂದ ಮಾಧ್ಯಮ-ದಿಕ್ಕುದೆಸೆ ಗೋಷ್ಠಿ, 11.30ರಿಂದ ಹರಿಕಥೆ, ಮಧ್ಯಾಹ್ನ 12ರಿಂದ ವೈದ್ಯಕೀಯ ಸಾಹಿತ್ಯ ಮತ್ತು ಸಾಮಾಜಿಕ ಸ್ವಾಸ್ಥ್ಯ, 1ರಿಂದ ಸಮೂಹ ನೃತ್ಯ, 1.30ರಿಂದ ಗಮಕ ನಡೆಯಲಿದೆ. 2ರಿಂದ ರಾಮಕೃಷ್ಣಭಟ್ ಚೊಕ್ಕಾಡಿ ಅವರಿಂದ ಕರಾವಳಿಯ ಕನ್ನಡ ಮಾಧ್ಯಮ ಶಾಲೆಗಳು, ವಿಶೇಷ ಉಪನ್ಯಾಸ- 3, 2.30ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ, 3.15ರಿಂದ ಸಾಂಸ್ಕೃತಿಕ ಕಾರ್ಯಕ್ರಮ, 3.30ರಿಂದ ಬಹಿರಂಗ ಅಧಿವೇಶನ, 4ರಿಂದ ಸನ್ಮಾನ ಮತ್ತು ಸಮಾರೋಪ ನಡೆಯಲಿದೆ ಎಂದರು. ಕೇಂದ್ರ ಮಾರ್ಗದರ್ಶಕ ಸಮಿತಿ ಸದಸ್ಯ ಡಾ. ಮುರಲೀ ಮೋಹನ್ ಚೂಂತಾರು, ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಮಾಧವ ಎಂ.ಕೆ., ಗೌರವ ಕಾರ್ಯದರ್ಶಿ ವಿನಯ ಆಚಾರ್ಯ, ಸಮ್ಮೇಳನ ಸಂಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಮಂಜುನಾಥ ಎಸ್. ರೇವಣ್‌ಕರ್, ಕಾರ್ಯದರ್ಶಿ ಪುಷ್ಪರಾಜ್ ಕೆ., ಕೋಶಾಧ್ಯಕ್ಷ ಕೆ. ಚಂದ್ರಹಾಸ ಶೆಟ್ಟಿ, ಮಾಧ್ಯಮ ಸಮಿತಿ ಸಂಚಾಲಕ ರೇಮಂಡ್ ಡಿಕುನ್ಹ ತಾಕೊಡೆ ಉಪಸ್ಥಿತರಿದ್ದರು.