ಹೊಸದಿಲ್ಲಿ: ಅವಧಿ ವಿಸ್ತರಣೆ
Published Date: 17-Mar-2024 Link-Copied
ಆಧಾರ್ ಕಾರ್ಡ್ ಮಾಹಿತಿಯನ್ನು ಉಚಿತವಾಗಿ ಪರಿಷ್ಕರಿಸಲು ನೀಡಿದ್ದ ಗಡುವನ್ನು ಆಧಾರ್ ಪ್ರಾಧಿಕಾರ 2024ರ ಜೂನ್ 14ರವರೆಗೆ ವಿಸ್ತರಿಸಿದೆ. ಇದರೊಂದಿಗೆ ಇನ್ನೂ ಮೂರು ತಿಂಗಳು ಆಧಾರ್ ಕಾರ್ಡ್ ಬಳಕೆದಾರರು ಉಚಿತ ಆಧಾರ್ ಅಪ್‌ಡೇಟ್ ಪ್ರಯೋಜನ ಪಡೆಯಬಹುದಾಗಿದೆ. ಆದರೆ, ಉಚಿತ ಪರಿಷ್ಕರಣೆ ಸೇವೆಯು ಆನ್‌ಲೈನ್ ಪೋರ್ಟಲ್‌ನಲ್ಲಿ ಮಾತ್ರ ಲಭ್ಯವಿದ್ದು, ಅಲ್ಲಿ ದಾಖಲೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ತಿದ್ದುಪಡಿಗೆ ಮನವಿ ಸಲ್ಲಿಸಬಹುದಾಗಿದೆ. ಆಧಾರ್ ಕೇಂದ್ರಕ್ಕೆ ಹೋದರೆ 50 ರೂ. ಪಾವತಿಸುವುದು ಕಡ್ಡಾಯ. ಈ ಮುನ್ನ ಮಾರ್ಚ್ 14ರವರೆಗೆ ಉಚಿತ ಆಧಾರ್ ಪರಿಷ್ಕರಣೆಗೆ ಪ್ರಾಧಿಕಾರ ಗಡುವು ನೀಡಿತ್ತು.