ಸುರ್ಯ ಶ್ರೀ ಸದಾಶಿವರುದ್ರ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ
Published Date: 16-Mar-2024 Link-Copied
ಬೆಳ್ತಂಗಡಿಯ ನಡ ಗ್ರಾಮದ ಶ್ರೀ ಸದಾಶಿವರುದ್ರ ದೇವಾಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಮಾ. 19ರಂದು ಮೊದಲ್ಗೊಂಡು ಮಾ. 23ರ ವೆರೆಗೆ ನಡೆಯಲಿದೆ. ಧಾರ್ಮಿಕ ಕಾರ್ಯಕ್ರಮಗಳು: ಮಾ. 18 ಬೆಳಗ್ಗೆ 7.30ರಿಂದ ಪುಣ್ಯಾಹ, ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ಮಧ್ಯಾಹ್ನ 12.30ರಿಂದ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8-00ರಿಂದ ರಂಗಪೂಜೆ, ಉತ್ಸವ. ಮಾ. 19 ಬೆಳಗ್ಗೆ 9-15ರಿಂದ ಗಣಪತಿ ಹೋಮ, ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ. ಮಾ. 20 ಮಧ್ಯಾಹ್ನ 12.30ರಿಂದ ಮಹಾಪೂಜೆ, ನಿತ್ಯ ಬಲಿ, ಅನ್ನಸಂತರ್ಪಣೆ ಸಂಜೆ 6.00ರಿಂದ ಸುರ್ಯಗುತ್ತು ಮನೆಯಿಂದ ಧರ್ಮದೈವಗಳ ಭಂಡಾರದ ಆಗಮನ, ರಾತ್ರಿ 8.00ರಿಂದ ಉತ್ಸವ ಹೊರಟು ವಸಂತಕಟ್ಟೆ ಪೂಜೆ, ಮಹಾಪೂಜೆ. ಮಾ. 21 ಬೆಳಗ್ಗೆ 7.00ರಿಂದ ಸೊಡರಬಲಿ ಉತ್ಸವ. ಮಧ್ಯಾಹ್ನ 12.30ರಿಂದ ಮಹಾಪೂಜೆ, ಅನ್ನಸಂತರ್ಪಣೆ. ರಾತ್ರಿ 8.00 ರಿಂದ ಉತ್ಸವ ಹೊರಟು ಕೆರೆಕಟ್ಟೆ ಪೂಜೆ, ಮಹಾಪೂಜೆ. ಮಾ. 22 ಬೆಳಗ್ಗೆ 8.45ರಿಂದ ದರ್ಶನಬಲಿ ಉತ್ಸವ, ಮಧ್ಯಾಹ್ನ ಗಂಟೆ 12.30ರಿಂದ ಮಹಾಪೂಜೆ, 1.00ರಿಂದ ಪ್ರಸಾದ ವಿತರಣೆ, ಅನ್ನಸಂತರ್ಪಣೆ ರಾತ್ರಿ 8.00ರಿಂದ ಉತ್ಸವ, ಪುಷ್ಪ ರಥೋತ್ಸವ, ನೃತ್ಯಬಲಿ ಉತ್ಸವ, ರಥಕಟ್ಟೆ ಪೂಜೆ, ಮಹಾಪೂಜೆ, ಭೂತಬಲಿ, ಶಯನೋತ್ಸವಮಾ. 23 ಬೆಳಗ್ಗೆ 9.00ರಿಂದ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ಸಂಜೆ 6.00ಕ್ಕೆ ಯಾತ್ರಾ ಹೋಮ, ಅವಬೃತ ಸ್ನಾನಕ್ಕೆ ಹೊರಡುವುದು. ರಾತ್ರಿ 10.30ಕ್ಕೆ ಧ್ವಜಾವರೋಹಣ. ರಾತ್ರಿ 11.00ರಿಂದ ದೈವಗಳ ನೇಮ. ಸಾಂಸ್ಕೃತಿಕ ಕಾರ್ಯಕ್ರಮಗಳು: ಮಾ. 20 ರಾತ್ರಿ 9.30ರಿಂದ ರಾಜ್ಯ ಪ್ರಶಸ್ತಿ ವಿಜೇತ ತೆಲಿಕೆದ ಬೊಳ್ಳಿ ಡಾ|| ದೇವದಾಸ್ ಕಾಪಿಕಾಡ್ ರಚಿಸಿ, ನಟಿಸಿ ನಿರ್ದೇಶಿಸಿರುವ ತುಳು ಹಾಸ್ಯಮಯ ನಾಟಕ “ಪುದರ್‌ದೀದಾಂಡ್”. ಮಾ. 21 ರಾತ್ರಿ 9.30ರಿಂದ ದುರ್ಗಾ ಸ್ವಾತಿ ನೃತ್ಯಾಲಯ, ಅಸೈಗೊಳಿ ಇದರ ನೃತ್ಯ ಗುರು ಕರ್ನಾಟಕ ಕಲಾಶ್ರೀ ವಿದುಷಿ ಸ್ಥಾತಿ ಭಟ್ ಪಿ. ಇವರ ಶಿಷ್ಯರಿಂದ ನೃತ್ಯಾರಾಧನ ರಾತ್ರಿ 11.00ರಿಂದ ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ ಇವರಿಂದ ಯಕ್ಷಗಾನ ಬಯಲಾಟ “ನಾಗರ ಪಂಚಮಿ”. ಮಾ. 22 ರಾತ್ರಿ 9.30ರಿಂದ ಅಂಗನವಾಡಿ ಕೇಂದ್ರ, ಸುರ್ಯ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಸುರ್ಯ ಇಲ್ಲಿಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 11.00ರಿಂದ "ಸಂಗಮ ಕಲಾವಿದರು'' ಉಜಿರೆ ಇವರಿಂದ ಸುಬ್ಬು ಸಂಟ್ಯಾರ್ ರಚಿಸಿ, ಗಿರೀಶ್ ಹೊಳ್ಳ ನಿರ್ದೇಶಿಸಿರುವ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ಪಚ್ಚು ಪಾತೆರೊಡು”.