ಮೂಡುಬಿದಿರೆ: ಫೆಬ್ರವರಿ 19ರಿಂದ 24ರವರೆಗೆ ಮೂಡುಬಿದಿರೆ ಸಮಾಜ ಮಂದಿರದಲ್ಲಿ ಆಧಾರ್ ಶಿಬಿರ
Published Date: 19-Feb-2024 Link-Copied
ಮೂಡುಬಿದಿರೆ : ಪುರಸಭೆ ಸಮಾಜ ಮಂದಿರ ಹಾಗೂ ಮಂಗಳೂರು ಆಧಾರ್ ಸೇವಾ ಕೇಂದ್ರ ಇವುಗಳ ಸಹಯೋಗದಲ್ಲಿ ಸಮಾಜ ಮಂದಿರದಲ್ಲಿ ಫೆ. 19ರಿಂದ 24ರ ವರೆಗೆ ಬೆ. ಗಂ. 10ರಿಂದ ಸಂಜೆ 4ರವರೆಗೆ ಆಧಾರ್ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಈ ಆಧಾರ್ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪುರಸಭಾ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 1. ಹೊಸ ಆಧಾರ್ ಕಾರ್ಡ್: ಹೊಸದಾಗಿ ಮಾಡಿಸುವವರು ಜನನ ಪ್ರಮಾಣ ಪತ್ರದ ಮೂಲಪ್ರತಿ, ತಂದೆ/ತಾಯಿಯ ಆಧಾರ್ ಕಾರ್ಡ್ ತರಬೇಕು, ಶುಲ್ಕ ಇಲ್ಲ. 2. ಬಯೋಮೆಟ್ರಿಕ್ ಅಪ್ಡೇಟ್: 5 ರಿಂದ 7 ಹಾಗೂ 15 ರಿಂದ 17 ವರ್ಷದ ಮಕ್ಕಳು ಫೋಟೋ, ಥಂಬ್ ಅಪ್ಡೇಟ್ ಕಡ್ಡಾಯವಾಗಿ ಮಾಡಬೇಕು. ಅಪ್ಡೇಟ್ ಮಾಡದಿದ್ದಲ್ಲಿ ಆಧಾರ್ ಸಸ್ಪೆಂಡ್ ಆಗುತ್ತದೆ, ಸ್ಕಾಲರ್‌ಶಿಪ್ ಸಿಗುವುದೂ ರದ್ದಾಗುತ್ತದೆ. 3. ಇತರ ತಿದ್ದುಪಡಿಗಳು: ತಂದೆ/ತಾಯಿ/ಗಂಡನ ಹೆಸರು, ಜನ್ಮ ದಿನಾಂಕ, ವಿಳಾಸ ತಿದ್ದುಪಡಿ, ಲಿಂಗ, ಮೊಬೈಲ್ ಸಂಖ್ಯೆ, ಇ-ಮೇಲ್ ತಿದ್ದುಪಡಿಗಳಿಗೆ ಶುಲ್ಕ 50 ರೂ. ತೆರಬೇಕಾಗುವುದು. 4. ಆಧಾರ್‌ನಲ್ಲಿ ಫೋಟೋ ತಿದ್ದುಪಡಿ: 2016ಕ್ಕಿಂತ ಹಳೆಯ ಆಧಾರ್ ಹೊಂದಿದವರು ಕಡ್ಡಾಯವಾಗಿ ಥಂಬ್ ಅಪ್ಡೇಟ್ ಮಾಡಬೇಕು. ಈಗಾಗಲೇ ಹಲವಾರು ಥಂಬ್ ಅಪ್ಡೇಟ್ ಮಾಡದೆ ರೇಶನ್ ಕಾರ್ಡ್, ಪೆನ್ಶನ್ ಮತ್ತು ಇತರ ಸರಕಾರಿ ಸೌಲಭ್ಯಗಳಿಂದ ವಂಚಿರಾಗುತ್ತಿದ್ದಾರೆ. ಇದಕ್ಕೆ ಶುಲ್ಕ 100 ರೂ. ಮಾತ್ರ. 5. ಯೋಜನೆಗಳು: ಎಲ್ಲಾ ಸರಕಾರಿ ಯೋಜನೆಗಳನ್ನು ಪಡೆಯಲು 10 ವರ್ಷ ಮತ್ತು ಅದಕ್ಕೂ ಮೀರಿದ ಆಧಾರ್ ಹೊಂದಿರುವವರು ಕಡ್ಡಾಯವಾಗಿ ಬಯೋಮೆಟ್ರಿಕ್ ಮತ್ತು ಡಾಕ್ಯುಮೆಂಟ್ಸ್ ಅಪ್ಡೇಟ್ ಮಾಡಬೇಕಾಗಿದೆ. ಇಲ್ಲವಾದಲ್ಲಿ ಆಧಾರ್ ಮಾಡದಿದ್ದರೆ ಆಧಾರ್ ಡಿಆಕ್ಟಿವೇಟ್ ಆಗುತ್ತದೆ. ಈ ಬಗ್ಗೆ ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಪಾಸ್‌ಪೋರ್ಟ್ ಇತ್ಯಾದಿಗಳ ಮೂಲಪ್ರತಿ, ಬಯೋಮೆಟ್ರಿಕ್ ಅಪ್ಡೇಟ್ (ಫೋಟೋ ಥಂಬ್)ಗೆ ಶುಲ್ಕ 100 ರೂ. 6. ಡಾಕ್ಯುಮೆಂಟ್ಸ್ ಅಪ್ಡೇಟ್: 2016ಕ್ಕಿಂತ ಹಳೆಯ ಆಧಾರ್ ಕಾರ್ಡ್ ಹೊಂದಿದವರು ಕಡ್ಡಾಯವಾಗಿ 10 ವರ್ಷದೊಳಗೆ ಅಪ್ಡೇಟ್ ಮಾಡಬೇಕು. ಅಪ್ಡೇಟ್ ಮಾಡದಿದಲ್ಲಿ ಆಧಾರ್ ಡಿಆಕ್ಟಿವೇಟ್ ಆಗುತ್ತದೆ. ಇದಕ್ಕೆ ಶುಲ್ಕ 50 ರೂ. ಒರಿಜಿನಲ್ ಡಾಕ್ಯುಮೆಂಟ್ಸ್ ಕಡ್ಡಾಯವಾಗಿ ತರಬೇಕು ಜೆರಾಕ್ಸ್ ಪ್ರತಿ ಸ್ವೀಕರಿಸುವುದಿಲ್ಲ.