ಸತ್ತೂರು, ಧಾರವಾಡ: ಕರ್ನಾಟಕ ಭೌತಚಿಕಿತ್ಸಕರ ಘಟಕದ ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನ
Published Date: 17-Feb-2024 Link-Copied
ಧಾರವಾಡದ ಎಸ್.ಡಿ.ಎಂ. ಕಾಲೇಜ್ ಆಫ್ ಫಿಸಿಯೋಥೆರಪಿಯು “ಕರ್ನಾಟಕ ಭೌತಚಿಕಿತ್ಸಕರ ಘಟಕದ” ಪ್ರಥಮ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಆಯೋಜಿಸಲಾಯಿತು. “ಅಭ್ಯಾಸದ ಸಿದ್ದಾಂತ” ಎಂಬ ಧ್ಯೇಯೆಯೊಂದಿಗೆ ಫೆಬ್ರವರಿ 16 ಮತ್ತು 17ರಂದು ಡಿ. ವೀರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಯಿತು. ಈ ಸಮ್ಮೇಳನದಲ್ಲಿ ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಭೌತಚಿಕಿತ್ಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಭಾರತದ ಸಂಸದೀಯ ವ್ಯವಹಾರಗಳ ಸಚಿವರು ಮತ್ತು ಗಣಿ ಮತ್ತು ಕಲ್ಲಿದ್ದಲು ಸಚಿವರಾದ ಪ್ರಹ್ಲಾದ್ ಜೋಶಿ ಅವರು ಮುಖ್ಯ ಅತಿಥಿಗಳಾಗಿದ್ದು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ಭೌತಚಿಕಿತ್ಸಕರು ಮತ್ತು ನಾನವತಿ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಅಲಿ ಇರಾನಿ, ಎನ್.ಸಿ.ಎ.ಎಚ್.ಪಿ.ಯ ಸದಸ್ಯರಾದ ಡಾ. ಕೆ. ಮಾಧವಿ, ಭಾರತೀಯ ಭೌತಚಿಕಿತ್ಸಕರ ಸಂಘದ ಉಪ ರಾಷ್ಟ್ರಾಧ್ಯಕ್ಷರಾದ ಡಾ. ಸುರೇಶ ಬಾಬು ರೆಡ್ಡಿ ಅವರು ಗೌರವ ಅತಿಥಿಗಳಾಗಿದ್ದರು. ಎಸ್.ಡಿ.ಎಂ. ಫಿಸಿಯೋಥೆರಪಿಯ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಅವರು ಪ್ರಸ್ತಾವಿಕ ಭಾಷಣ ಮಾಡಿದರು. ಭೌತಚಿಕಿತ್ಸಾ ತಜ್ಞರಿಗೆ ವೃತ್ತಿಪರ ಪ್ರಶಸ್ತಿಗಳನ್ನು ನೀಡಲಾಯಿತು. ಮುಖ್ಯ ಅತಿಥಿಗಳು ಸಮ್ಮೇಳನದ ಸ್ಮರಿಣಿಕೆಯನ್ನು ಅನಾವರಣಗೊಳಿಸಿದರು. ಮುಖ್ಯ ಅತಿಥಿಗಳಾದ ಪ್ರಹ್ಲಾದ್ ಜೋಶಿ ಅವರು ಸಮ್ಮೇಳನ ಉದ್ದೇಶಿಸಿ ಮಾತನಾಡುತ್ತಾ, ಭೌತಚಿಕಿತ್ಸೆ ಮತ್ತು ಯೋಗವು ರೋಗಿಯನ್ನು ಗುಣಪಡಿಸುವಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತವೆ. ನಮ್ಮ ದೇಶವನ್ನು ರೋಗ ಮುಕ್ತ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು. ಭೌತಚಿಕಿತ್ಸಕರು ರೋಗಿಗಳನ್ನು ಆತ್ಮವಿಶ್ವಾಸದಿಂದ ಗುಣಪಡಿಸಬೇಕು. ಭಾರತೀಯ ಆರೋಗ್ಯ ವಿಜ್ಞಾನ ವೃತ್ತಿಪರರು ವಿಶ್ವದಲ್ಲಿ ಅತ್ಯುನ್ನತ ವಿಶ್ವಾಸಾರ್ಹತೆಯನ್ನು ಹೊಂದಿದ್ದಾರೆ. ಭೌತಚಿಕಿತ್ಸಕರು ಹೊಸ ಆವಿಷ್ಕಾರ ಮತ್ತು ಜ್ಞಾನದೊಂದಿಗೆ ತಮ್ಮನ್ನು ನವೀಕರಿಸಿಕೊಳ್ಳಬೇಕು. ವೃತ್ತಿಪರರು ತಮ್ಮ ಅನುಭವಗಳೊಂದಿಗೆ ಪರಿಣಿತರಾಗುತ್ತಾರೆ. ಈ ಸಮ್ಮೇಳನದಲ್ಲಿ ಎಸ್.ಡಿ.ಎಂ. ವಿಶ್ವವಿದ್ಯಾಲಯದ ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ಡಾ. ಎಸ್. ಕೆ ಜೋಶಿ, ಕುಲಸಚಿವರಾದ ಡಾ. ಚಿದೇಂದ್ರ ಶೆಟ್ಟರ, ಸಂಘಟನಾ ಕಾರ್ಯದರ್ಶಿಗಳಾದ ಡಾ. ಮಧುಲಿಖಾ ಹೊರಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಸಂಜನಾ ಮತ್ತು ವೃಂದಾ ಪ್ರಾರ್ಥಿಸಿದರು. ಪ್ರೋ. ಸುಧೀರ ಬಟ್‌ಬೋಲನ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಸಮ್ಮೇಳನದ ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಯು. ಟಿ. ಇಫ್ತಿಖರ ಅಲಿ ಅವರು ವಂದಣಾರ್ಪನೆ ಸಲ್ಲಿಸಿದರು. ಡಾ. ಶರ್ಮಿಳಾ ದುದಾನಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.