ಆಳ್ವಾಸ್: ಕ್ರೀಡಾ ಕ್ಷೇತ್ರದಲ್ಲಿ ಉಚಿತ ಶಿಕ್ಷಣದ ಅವಕಾಶ
Published Date: 15-Feb-2024 Link-Copied
ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) 2024-25ನೇ ಶೈಕ್ಷಣಿಕ ಸಾಲಿನಲ್ಲಿ ಆಳ್ವಾಸ್ ಹಿರಿಯ ಪ್ರಾಥಮಿಕ, ಪ್ರೌಢಶಾಲೆ (ಕನ್ನಡ, ಇಂಗ್ಲೀಷ್ ಮಾಧ್ಯಮ ಮತ್ತು ಸಿ.ಬಿ.ಎಸ್.ಇ.) ಪದವಿಪೂರ್ವ, ಪದವಿ ಹಾಗೂ ಉನ್ನತ ವ್ಯಾಸಂಗದ ತರಗತಿಗಳಿಗೆ ದಾಖಲಾತಿ ಬಯಸುವ, ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿರುವ ಹಾಗೂ ಮಾಡಲಿಚ್ಛಿಸುವ ಕ್ರೀಡಾಪಟುಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಕಲ್ಪಿಸಿದೆ. ಸೇರಲಿಚ್ಚಿಸುವವರು ತಮ್ಮ ಕ್ರೀಡಾ ಸಾಧನೆಯ ದಾಖಲೆ, ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ, ಭಾವಚಿತ್ರ ಸಹಿತ ಸ್ವ-ವಿವರಗಳನ್ನು ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ, ದಕ್ಷಿಣ ಕನ್ನಡ - 574227 ಈ ವಿಳಾಸಕ್ಕೆ ದಿನಾಂಕ 20.03.2024 ರೊಳಗೆ ಅರ್ಜಿ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ ಆಯ್ಕೆ ನಡೆಯುವ ಕ್ರೀಡೆಗಳು ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ (ಕನ್ನಡ, ಇಂಗ್ಲೀಷ್ ಮಾಧ್ಯಮ ಮತ್ತು ಸಿ.ಬಿ.ಎಸ್.ಇ.): ಅಥ್ಲೆಟಿಕ್ಸ್ ಮತ್ತು ಗುಂಪು ಆಟಗಳು ಪಿಯುಸಿ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ವಾಲಿಬಾಲ್, ಕುಸ್ತಿ, ಬಾಲ್ ಬ್ಯಾಡ್ಮಿಂಟನ್, ಈಜು, ವೈಟ್‌ಫ್ಟಿಂಗ್, ಬ್ಯಾಡ್ಮಿಂಟನ್ ಪದವಿ ಮತ್ತು ಸ್ನಾತಕೊತ್ತರ: ಅಥ್ಲೆಟಿಕ್ಸ್, ಕಬಡ್ಡಿ, ಖೋ ಖೋ, ಕುಸ್ತಿ, ವೈಟ್‌ಫ್ಟಿಂಗ್, ವಾಲಿಬಾಲ್, ಹ್ಯಾಂಡ್ ಬಾಲ್, ಸಾಫ್ಟ್ ಬಾಲ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್, ಈಜು, ಬ್ಯಾಡ್ಮಿಂಟನ್ ಡಾ| ಎಂ. ಮೋಹನ್ ಆಳ್ವ 9620387666, 8073037640, 9742109257