ಆಳ್ವಾಸ್ ಶಾಲೆಯ 04 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
Published Date: 24-Aug-2026 Link-Copied
ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಛೇರಿ (ಆಡಳಿತ) ಮಂಗಳೂರು ಹಾಗೂ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಲೇಡಿಹಿಲ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ಹಾಗೂ 17 ವರ್ಷ ವಯೋಮಿತಿಯ ಬಾಲಕ ಬಾಲಕಿಯರ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು 03 ಚಿನ್ನ, 06 ಬೆಳ್ಳಿ ಹಾಗೂ 03 ಕಂಚು ಒಟ್ಟು 12 ಪದಕಗಳನ್ನು ಪಡೆದುಕೊಂಡು 04 ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಫಲಿತಾಂಶ : 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ : ಪ್ರೀತಿ 400ಮೀ ಫ್ರೀಸ್ಟೆಲ್ (ಪ್ರಥಮ), 200ಮೀ ಐಎಂ (ದ್ವಿತೀಯ), 50ಮೀ ಫ್ರೀಸ್ಟೆಲ್ (ದ್ವಿತೀಯ), 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ : ಅಭಿಷೇಕ್ 200ಮೀ ಫ್ರೀಸ್ಟೆಲ್ (ಪ್ರಥಮ), 50ಮೀ ಬಟರ್‌ಫ್ಲೆ (ದ್ವಿತೀಯ), 400ಮೀ ಐಎಂ (ಪ್ರಥಮ), ದುರ್ಗೇಶ್ 50ಮೀ ಬ್ರಿಸ್ಟ್ಸ್ಟೊಕ್ (ತೃತೀಯ), 200ಮೀ ಐಎಂ (ದ್ವಿತೀಯ), 50ಮೀ ಫ್ರೀಸ್ಟೆಲ್ (ತೃತೀಯ), ರಿತ್ವಿಜ್ 100ಮೀ ಫ್ರೀಸ್ಟೆಲ್ (ದ್ವಿತೀಯ), 50 ಮೀ ಬ್ಯಾಕ್‌ಸ್ಟೊಕ್ (ತೃತೀಯ), 50 ಮೀ ಫ್ರೀಸ್ಟೆಲ್ (ದ್ವಿತೀಯ) ವಿಜೇತರಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.