ಕೆ.ಎಂ.ಡಿ.ಸಿ ಯೋಜನೆಗಳ ಅನುಷ್ಠಾನಕ್ಕೆ ಚಾಲನೆ


Logo

Published Date: 18-Aug-2026 Link-Copied

ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಈ ಕೆಳಗಿನ ಯೋಜನೆಗಳಿಗೆ ದಿನಾಂಕ 18-08-2026 ರಿಂದ 17-09-2026 ರ ವರೆಗೆ ಅರ್ಜಿ ಆಹ್ವಾನಿಸಲಾಗಿದೆ. 1. ಅರಿವು (ವಿದ್ಯಾಭ್ಯಾಸ ಸಾಲ) ಯೋಜನೆ: ಈ ಯೋಜನೆಯಡಿಯಲ್ಲಿ CET / NEET ಮೂಲಕ ಆಯ್ಕೆಯಾಗಿ ವೃತ್ತಿಪರ ಶಿಕ್ಷಣ ಅಂದರೆ MBBS, MD, MS, BDS, MDS, B. Ayush, M. Ayush, B.E. B.Tech, B.Arch, M.E., M.Tech, M. Arch, D Pharma, B Pharma, M Pharma, B.Sc. in Horticulture. Agriculture, Sericulture, Dairy Technology. Forestry. Veterinary and Animal Science, Food Technotoyg, Bio Technology. MBA, MCA, ಮತ್ತು LLB 28 ವೃತ್ತಿಪರ ಕೋರ್ಸ್ ಮಾಡಬಯಸುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಅವರ ವ್ಯಾಸಂಗ ಪೂರ್ಣಗೊಳಿಸುವವರೆಗೆ ಪ್ರತಿ ವರ್ಷಕ್ಕೆ ರೂ. 50,000/- ದಿಂದ ರೂ. 5,00,000/-ದವರೆಗೆ ಸಾಲವನ್ನು ಮಂಜೂರು ಮಾಡಲಾಗುತ್ತದೆ. ವ್ಯಾಸಂಗ ಪೂರ್ಣಗೊಳಿಸಿದ 6 ತಿಂಗಳ ನಂತರ ಅಂತಹ ವಿದ್ಯಾರ್ಥಿಯು ಶೇ. 2ರ ಸೇವಾ ಶುಲ್ಕದೊಂದಿಗೆ ಸಾಲವನ್ನು ಮರುಪಾವತಿ ಮಾಡಬೇಕಾಗುತ್ತದೆ. ಈ ಯೋಜನೆಯಡಿ ಕುಟುಂಬದ ವಾರ್ಷಿಕ ಆದಾಯ ಮಿತಿ ರೂ. 8.00 ಲಕ್ಷಗಳು ಮೀರಿರಬಾರದು. 2. ಸ್ವಾವಲಂಬಿ ಸಾರಥಿ ಯೋಜನೆ: ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ / ಷೆಡ್ಯೂಲ್ಡ್ ಬ್ಯಾಂಕ್‌ಗಳ ಆರ್.ಬಿ.ಐ.ನಿಂದ ಮಾನ್ಯತೆ ಪಡೆದ ವಿವಿಧ ಫೈನ್ಯಾನ್ಸ್ ಸಂಸ್ಥೆಗಳ (ಫೈನ್ಯಾನ್ಸ್ ಕಂಪನೀಸ್ / ಕೋ-ಆಪರೇಟೀವ್ ಬ್ಯಾಂಕ್ / ಸೊಸೈಟಿಗಳು) ಸಹಯೋಗದೊಂದಿಗೆ ಅನುಷ್ಠಾನ ಗೊಳಿಸಲಾಗುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು / ಷೆಡ್ಯೂಲ್ಡ್ ಬ್ಯಾಂಕುಗಳು (finance companies) co-operative bank/ societies ಸಾಲ ಮಂಜೂರಾತಿ ನೀಡಿದ ಫಲಾನುಭವಿಗಳಿಗೆ ಪ್ಯಾಸೆಂಜರ್ ಆಟೋರಿಕ್ಷಾ / ಗೂಡ್ಸ್ ವಾಹನ / ಟ್ಯಾಕ್ಸಿ ಖರೀದಿಸಲು on road price ಮೇಲೆ ಕನಿಷ್ಠ ಶೇ. 50 ರಷ್ಟು ಸಹಾಯಧನ ಗರಿಷ್ಠ 3.00 ಲಕ್ಷ (ಪ್ಯಾಸಿಂಜರ್ ಆಟೋ ರಿಕ್ಷಾಗೆ ಗರಿಷ್ಠ 75,000) ಸಹಾಯಧನವನ್ನು ನೀಡಲಾಗುವುದು. 3. ಶ್ರಮಶಕ್ತಿ ಯೋಜನೆ: ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವರ್ಗದ ಕುಲಕಸುಬುದಾರರು ತಮ್ಮ ಕಲಾತ್ಮಕ ಮತ್ತು ತಾಂತ್ರಿಕ ಕೌಶಲ್ಯವನ್ನು ವೃದ್ಧಿಸಿಕೊಂಡು ಅದೇ ಕಸುಬನ್ನು ಮುಂದುವರೆಸಲು ಅಥವಾ ಸಣ್ಣ ವ್ಯಾಪಾರವನ್ನು ಪ್ರಾರಂಭಿಸಲು ಅಥವಾ ಅಭಿವೃದ್ಧಿಗೊಳಿಸುವ ಸಲುವಾಗಿ ನಿಗಮದಿಂದ ಕಡಿಮೆ ಬಡ್ಡಿ ದರದಲ್ಲಿ ರೂ. 50,000/- ಸಾಲ ಮತ್ತು ಸಹಾಯಧನ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಇದರಲ್ಲಿ ಶೇ. 50ರಷ್ಟು ಸಾಲ ಮತ್ತು ಶೇ. 50ರಷ್ಟು ಸಹಾಯಧನವಾಗಿರುತ್ತದೆ. 4. ವೃತ್ತಿ ಪ್ರೋತ್ಸಾಹ ಯೋಜನೆ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿಗೆ ಅನ್ವಯವಾಗುವಂತೆ ಬ್ಯಾಂಕ್ ಸಾಲದ ಬದಲಾಗಿ ಕೆ.ಎಂ.ಡಿ.ಸಿ ನಿಗಮದ ವತಿಯಿಂದಲೇ ಒಟ್ಟು ಮೊತ್ತ ರೂ. 1.00 ಲಕ್ಷ (ಒಂದು ಲಕ್ಷ ರೂಪಾಯಿಗಳು) ಅದರಲ್ಲಿ ಶೇ. 50ರಷ್ಟು ಸಾಲ ಹಾಗೂ ಶೇ. 50ರಷ್ಟು ಸಹಾಯಧನ ನೀಡಲಾಗುತ್ತದೆ. 5. ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹ ಯೋಜನೆ: ರೇಷ್ಮೆ ನೂಲು ಬಿಚ್ಚಾಣಿಕೆಯಲ್ಲಿ ತೊಡಗಿರುವ ಅಲ್ಪಸಂಖ್ಯಾತ ಫಲಾನುಭವಿಗಳನ್ನು ಪ್ರೋತ್ಸಾಹಿಸಿ ಅವರ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸುವ ಸಲುವಾಗಿ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಅಗತ್ಯವಿರುವ ದುಡಿಮೆ ಬಂಡವಾಳ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸಲು ನಿಗಮದಿಂದ ರೂ. 2.00 ಲಕ್ಷದ ವರೆಗೆ ಸಾಲ ಸಹಾಯಧನ ಒದಗಿಸಲಾಗುವುದು. ಇದರಲ್ಲಿ ಶೇ. 50 ರಷ್ಟು ಸಾಲ ಮತ್ತು ಶೇ. 50 ಸಹಾಯಧನವಾಗಿರುತ್ತದೆ. 6. ಗಂಗಾ ಕಲ್ಯಾಣ ಯೋಜನೆ: (ಅ) ವೈಯಕ್ತಿಕ ಕೊಳವೆ ಬಾವಿ ಯೋಜನೆ: ಗ್ರಾಮೀಣ ಪ್ರದೇಶದಲ್ಲಿ ಕೃಷಿ ಜಮೀನಿಗೆ ನೀರಿನ ವ್ಯವಸ್ಥೆ ಲಭ್ಯವಿರುವುದಿಲ್ಲವೋ ಅಂತಹ ಸ್ಥಳದಲ್ಲಿ ತಜ್ಞ ಭೂ ವಿಜ್ಞಾನಿಗಳ ಮೂಲಕ ಗುರುತಿಸಲ್ಪಟ್ಟ ಜಲ ಬಿಂದು ವ್ಯಾಪ್ತಿಯೊಳಗೆ ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆದು, ಕೊಳವೆ ಮೂಲಕ ಕೃಷಿಭೂಮಿಗೆ ನೀರನ್ನು ಒದಗಿಸಲಾಗುತ್ತದೆ. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ 01 ಎಕರೆ 20 ಗುಂಟೆಯಿಂದ 5 ಎಕರೆ ಭೂಮಿಯನ್ನು ಹೊಂದಿರುವ ಫಲಾನುಭವಿಗಳಿಗೆ ಒಂದು ಕೊಳವೆ ಬಾವಿ ಕೊರೆಯಿಸಿ ಪಂಪ್‌ಸೆಟ್ ಮತ್ತು ವಿದ್ಯುದ್ದೀಕರಣ ಸೇರಿ ಒಟ್ಟು ವೆಚ್ಚ ರೂ. 4.00 ಲಕ್ಷಗಳನ್ನು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಜಿಲ್ಲೆ, (ರಾಮನಗರ), ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಲಾಗಿದೆ ಮತ್ತು ಇತರೆ ಜಿಲ್ಲೆಗಳಿಗೆ ರೂ. 3.00 ಲಕ್ಷಗಳು. ಅರ್ಜಿದಾರರು ಈ ಮೊತ್ತದಲ್ಲಿ ಕೊಳವೆಬಾವಿ ಕೊರೆಯುವಿಕೆ, ಪಂಪು ಮೋಟಾರು ಸರಬರಾಜು ಮತ್ತು ವಿದ್ಯುದ್ದೀಕರಣ ಠೇವಣಿ ಮೊತ್ತ ಒಳಗೊಂಡಿರುತ್ತದೆ. ವಿದ್ಯುದ್ದೀಕರಣ ಠೇವಣಿ ರೂ. 75,000ವನ್ನು ನಿಗಮದಿಂದ ನೇರವಾಗಿ ನೀಡಲಾಗುತ್ತದೆ. (ಆ) ಏತ ನೀರಾವರಿ ಯೋಜನೆ: ಈ ಯೋಜನೆಯಡಿ ನಿರಂತರವಾಗಿ ಹರಿಯುತ್ತಿರುವ ನೀರನ್ನು (ನದಿ ಅಥವಾ ಕೆರೆ) ಪೈಪ್ ಲೈನ್ ಮೂಲಕ ಮೇಲಕ್ಕೆ ಎತ್ತಿ, ಕೃಷಿ ಜಮೀನಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಏತ ನೀರಾವರಿ ಯೋಜನೆಯ ಘಟಕ ವೆಚ್ಚವನ್ನು ಪ್ರತಿ ಎಕರೆಗೆ ರೂ. 40,000 ದಂತೆ ಬಿಡುಗಡೆ ಮಾಡಲಾಗುವುದು. ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. 7. ನವೋದ್ಯಮ ಯೋಜನೆ: ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ಅಲ್ಪ ಸಂಖ್ಯಾತರ ಸಮುದಾಯದ ಯುವಕ/ಯುವತಿಯರಿಗೆ ನವೋದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ ನೀಡುವ ಸಲುವಾಗಿ ರೂ. 50.00 ಲಕ್ಷಗಳ ಸಹಾಯ ಸರ್ಕಾರದ ಯೋಜನೆಯನ್ನು ಮಂಜೂರಾತಿಯನ್ನು ನೀಡಿ ಆದೇಶಿಸಿದೆ. ಈ ಯೋಜನೆಯನ್ನು ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ ಇಲಾಖೆಯ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗಿದೆ. 8. ಫಾಸ್ಟ್ ಫುಡ್ ಟ್ರಕ್/ಟ್ರೈಲರ್ ಕಿಚನ್ ಫುಡ್ (ಕಿಯೋಸ್ಕ್) ಯೋಜನೆ: ಈ ಯೋಜನೆಯಡಿಯಲ್ಲಿ ರಾಜ್ಯದಲ್ಲಿನ ನಗರ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆಯನ್ನು ನಿಗಿಸಲು ಹಾಗೂ ಉದ್ಯೋಗಾವಕಾಶವನ್ನು ಕಲ್ಪಿಸಲು ಮತ್ತು ಆಹಾರ ಸೇವನೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಯುವಕ/ಯುವತಿಯರಿಗೆ ಉದ್ಯೋಗಾವಕಾಶವನ್ನು ಕಲ್ಪಿಸಲು ಆರ್ಥಿಕವಾಗಿ ಸದೃಢರನ್ನಾಗಿಸಲು ಫಾಸ್ಟ್ ಫುಡ್ ಟ್ರಕ್/ಟ್ರೈಲರ್/ಮೊಬೈಲ್ ಕಿಚನ್ ಫುಡ್ ಯೋಜನೆಯನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ. (ಕಿಯೋಸ್ಕ್) ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ವತಿಯಿಂದ ನಿರುದ್ಯೋಗಿ ಯುವಕ ಯುವತಿಯರಿಗೆ ಫಾಸ್ಟ್ ಫುಡ್ ಪಿಕ್ ಟ್ರೈಲರ್/ಮೊಬೈಲ್ ಕಿಚನ್ ಫುಡ್ (ಕಿಯೋಸ್ಕ್) ಸೌಲಭ್ಯಗಳನ್ನು ನಿಗಮಗಳ ಉದ್ಯಮಶೀಲತಾ ಅಭಿವೃದ್ಧಿ ಯೋಜನೆಯಡಿಯಲ್ಲಿ ಘಟಕ ವೆಚ್ಚದ ಶೇ. 75ರಷ್ಟು ಅಥವಾ ಗರಿಷ್ಟ ರೂ.3.00 ಲಕ್ಷಗಳು. 9. ಅಲ್ಪ ಸಂಖ್ಯಾತರ ಸಮುದಾಯದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸ್ವಯಂ ಉದ್ಯೋಗ ಪ್ರೋತ್ಸಾಹ ಯೋಜನೆ : ಈ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಸಹಕಾರ ಇಲಾಖೆ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM)ದ ಸಹಯೋಗದಲ್ಲಿ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (NRLM) ಅಡಿಯಲ್ಲಿ ಸದಸ್ಯತ್ವವನ್ನು ಹೊಂದಿರುವ ಮತ್ತು ಹೊಸದಾಗಿ ನೋಂದಾಯಿಸಲ್ಪಡುವ ಅಲ್ಪ ಸಂಖ್ಯಾತರ ಸ್ವಸಹಾಯ ಗುಂಪುಗಳ ಮಹಿಳಾ ಸದಸ್ಯರಿಗೆ ಈ ಯೋಜನೆಯ ಪ್ರಯೋಜನವನ್ನು ಕಲ್ಪಿಸಲಾಗುವುದು. 10. ಸಿಖ್ಖಲಿಗಾರರ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕೆ ಪ್ರೋತ್ಸಾಹ ಯೋಜನೆ : ಈ ಯೋಜನೆಯಡಿಯಲ್ಲಿ ಸಿಖ್ ಧರ್ಮದಲ್ಲಿರುವ ಸಿಖ್ಖಲಿಗಾರ ಸಮುದಾಯದ ಜನರು ಕರ್ನಾಟಕದ ರಾಜ್ಯದ 12 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದು, ಆರ್ಥಿಕವಾಗಿ ಹಿಂದುಳಿದಿರುತ್ತಾರೆ. ಈ ಸಮುದಾಯದ ಹೆಚ್ಚಿನ ಕುಟುಂಬಗಳು ಐರನ್ ವೇರ್ ಕೆಲಸ, ವೆಲ್ಡಿಂಗ್/ಫ್ಯಾಬ್ರಿಕೇಟರ್ ಕೂಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ವಾರ್ಷಿಕ ಆದಾಯವು ರೂ. 50,000/- ರಿಂದ ರೂ.1,00,000/- ಗಳಾಗಿರುತ್ತದೆ. ಸಿಖ್ಖಲಿಗಾರ ಸಮುದಾಯದ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ಸಲುವಾಗಿ ನಿಗಮದಿಂದ ಸ್ವಯಂ ಉದ್ಯೋಗ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲು ರೂ. 50,000/- ಸಾಲ ಮತ್ತು ರೂ. 50,000/- ರೂ. 1.50 ಲಕ್ಷ ಸಹಾಯಧನ ಒದಗಿಸಲಾಗುವುದು. ಒಂದು ವೇಳೆ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ / ಆರ್ಥಿಕ ಸಂಸ್ಥೆಗಳಿಂದ ಸಾಲ ಪಡೆಯುವುದಾದಲ್ಲಿ ನಿಗಮದಿಂದ ಶೇ. 33 ಗರಿಷ್ಠ 1.00 ಲಕ್ಷ ಸಹಾಯಧನ ಒದಗಿಸಲಾಗುವುದು. 11. ಸಮುದಾಯ ಆಧಾರಿತ ತರಬೇತಿ ಯೋಜನೆ: ಈ ಯೋಜನೆಯಡಿಯಲ್ಲಿ ವಿವಿಧ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಸುಧಾರಿತ ತಂತ್ರಜ್ಞಾನಗಳಲ್ಲಿ ತರಬೇತಿ ಕಾರ್ಯಕ್ರಮಗಳು ನಿರುದ್ಯೋಗಿ ಯುವಕ/ ಯುವತಿಯರಿಗೆ ಸ್ವಯಂ ಉದ್ಯೋಗ ಪಡೆಯಲು ಅಥವಾ ತಮ್ಮದೇ ಆದ ಉದ್ಯಮಗಳನ್ನು ಸೃಷ್ಟಿಸಲು ಅವಕಾಶ ಕಲ್ಪಿಸುತ್ತವೆ. 12. ವಿದೇಶಿ ವಿದ್ಯಾಭ್ಯಾಸ ಸಾಲ : ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಆರ್ಥಿಕ/ ಸಾಲ ನೆರವು ನೀಡುವುದು ಈ ಯೋಜನೆಯ ಉದ್ದೇಶವಾಗಿದೆ. ಮಾನ್ಯತೆ ಪಡೆದಿರುವ ಯಾವುದೇ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಶೂನ್ಯ ಬಡ್ಡಿ ದರದಲ್ಲಿ ಪ್ರತಿ ವಿದ್ಯಾರ್ಥಿಗೆ ಆಸ್ತಿಯೂ ರೂ. (ಕಟ್ಟಡ, ಭೂಮಿ) ಅಡಮಾನದ ಮೇಲೆ ರೂ. 20.00 ಲಕ್ಷದ ವರೆಗೆ ಸಾಲ ಸೌಲಭ್ಯವು ಶೂನ್ಯ ಬಡ್ಡಿ ದರದಲ್ಲಿ ಒದಗಿಸಲಾಗುವುದು. 13. ವ್ಯಾಪಾರ / ಉದ್ಯಮೆ ನೇರ ಸಾಲ ಯೋಜನೆ: ಈ ಯೋಜನೆಯಡಿಯಲ್ಲಿ ವ್ಯಾಪಾರ / ಉದ್ಯಮೆ ಚಟುವಟಿಕೆ ಕೈಗೊಳ್ಳಲು ಬಯಸುವ ಫಲಾನುಭವಿಗಳಿಗೆ ಆಸ್ತಿಯ (ಕಟ್ಟಡ/ಭೂಮಿ) ಅಡಮಾನದ ಮೇಲೆ ಸಾಲವನ್ನು ಒದಗಿಸಲಾಗುವುದು. ಅರ್ಜಿದಾರನ/ಳ ಕುಟುಂಬದ ವಾರ್ಷಿಕ ಆದಾಯ ರೂ. 6,00,000/-ಗಳಿಗಿಂತ ಕಡಿಮೆ ಇರುವ ಅರ್ಜಿದಾರನಿಗೆ ಗರಿಷ್ಠ ರೂ. 20 ಲಕ್ಷದವರೆಗೆ ಸಾಲ ಶೇ. 4ರ ಬಡ್ಡಿ ದರದಲ್ಲಿ ನೀಡಲಾಗುವುದು. 14. ಸಾಂತ್ವನ ಯೋಜನೆ: ರಾಜ್ಯದ ಅಲ್ಪ ಸಂಖ್ಯಾತ ವಿಶೇಷ ಹಾಗೂ ದುರ್ಬಲ ವರ್ಗದ ಫಲಾನುಭವಿಗಳಿಗೆ ಗರಿಷ್ಠ ರೂ. 5.00 ಲಕ್ಷಗಳ ಘಟಕ ವೆಚ್ಚಕ್ಕೆ ಶೇ. 50ರಷ್ಟು ಸಹಾಯಧನ ಮತ್ತು ಶೇ 3ರ ಬಡ್ಡಿದರದಲ್ಲಿ ಶೇ 50 ರಷ್ಟು ಸಾಲವನ್ನು ನೀಡಲಾಗುವುದು. ರಾಜ್ಯದಲ್ಲಿ ಕೋಮು ಗಲಭೆ, ಮತ್ತು ಕೋಮು ಹಿಂಸಾಚಾರದ ಸಂದರ್ಭಗಳಲ್ಲಿ ಹಾಗೂ ಪರಿಸರ ವಿಕೋಪಗಳಿಂದ ವ್ಯಾಪಾರ ಕೇಂದ್ರಗಳು ಹಾಗೂ ವಾಸದ ಮನೆಗಳು ನಾಶ ಅಥವಾ ಹಾನಿಗೊಳಗಾಗಿದ್ದರೆ ಅಂತಹ ಪ್ರಕರಣಗಳಲ್ಲಿ ಕನಿಷ್ಠ ರೂ. 2.00 ಲಕ್ಷ ನಷ್ಟವಾಗಿದ್ದರೆ ಸಾಲ ಸೌಲಭ್ಯ ಒದಗಿಸಲಾಗುವುದು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img