ಫೆ. 10, 11ರಂದು ಮಂಗಳೂರಿನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ
Published Date: 05-Feb-2024 Link-Copied
ಮಂಗಳೂರು ನಗರದಲ್ಲಿ ಇದೀಗ 2 ವರ್ಷಗಳ ಬಳಿಕ ಫೆ. 10 ಮತ್ತು 11ರಂದು ತಣ್ಣೀರುಬಾವಿ ಬೀಚ್‌ನಲ್ಲಿ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ. ಟೀಂ ಮಂಗಳೂರು ತಂಡದ ನೇತೃತ್ವದಲ್ಲಿ ಒಎನ್‌ಜಿಸಿ-ಎಂ.ಆರ್.ಪಿ.ಎಲ್. ಪ್ರಾಯೋಜಕತ್ವದಲ್ಲಿ ನಡೆಯುವ ಗಾಳಿಪಟ ಉತ್ಸವಕ್ಕೆ ಫೆ. 10ರಂದು ಮಧ್ಯಾಹ್ನ 2.30ಕ್ಕೆ ಚಾಲನೆ ಸಿಗಲಿದ್ದು, ಸಂಜೆ 5ಕ್ಕೆ ಸಭೆ ನಡೆಯಲಿದೆ. ಮರುದಿನ ಅಪರಾಹ್ನ ಗಾಳಿಪಟ ಉತ್ಸವ ಮತ್ತೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಸಭೆ ಇರಲಿದೆ. ಮಲೇಷಿಯಾ, ಇಂಡೋನೇಶ್ಯಾ, ಗ್ರೀಸ್, ಸ್ವೀಡನ್, ಉಕ್ರೇನ್, ಥೈಲ್ಯಾಂಡ್, ವಿಯೆಟ್ನಾಂ, ಇಸ್ಟೋನಿಯ ದೇಶಗಳ 13 ಪ್ರತಿನಿಧಿಗಳು, ಮಹಾರಾಷ್ಟ್ರ, ಗುಜರಾತ್, ತೆಲಂಗಾಣ ಮತ್ತು ಕೇರಳದ ಸುಮಾರು 20 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.