ಸಾಗರ: ಮಲೆನಾಡ ಜೈನ ಅಡುಗೆ ಹಬ್ಬ ಕಾರ್ಯಕ್ರಮ


Logo

Published Date: 04-Aug-2026 Link-Copied

ಶಿವಮೊಗ್ಗ, ಆ.೦3: ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯಯುತ ಪೌಷ್ಠಿಕ ಆಹಾರದ ಕೊರತೆ ಹೆಚ್ಚುತ್ತಿರುವ ಪರ್ವಕಾಲದಲ್ಲಿ ಮಲೆನಾಡಿನ ಸಾಂಪ್ರದಾಯಿಕ ಆರೋಗ್ಯಕರ ಅಡುಗೆ ಹಬ್ಬ ಮುಂದಿನ ಪೀಳಿಗೆಗೆ ಉತ್ತಮ ಸಂದೇಶ ನೀಡುತ್ತದೆ ಎಂದು ಚಿಲುಮೆ ಪಂಚಕೂಟ ಜೈನ ಬಸದಿಯ ಅಧ್ಯಕ್ಷರಾದ ವಿ.ಪಿ.ಭರತ್‌ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಾಗರ ತಾಲ್ಲೂಕಿನ ಕರೂರು ಹೋಬಳಿ ತುಮರಿ ಗ್ರಾಮಪಂಚಾಯಿತಿ ವ್ಯಾಪ್ತಿ ವಳಗೆರೆ ಸಭಾಭವನದಲ್ಲಿ ವೀರರಾಣಿ ಚನ್ನಬೈರಾದೇವಿ ಜಿಲ್ಲಾ ಜೈನ ಸಂಘಟನೆವತಿಯಿಂದ ಆಯೋಜಿಸಲಾಗಿದ್ದ ಮಲೆನಾಡ ಜೈನ ಅಡುಗೆ ಹಬ್ಬಕಾರ್ಯ ಕ್ರಮದ ಉದ್ಘಾಟನೆಯನ್ನು ಹಿರಿಯರಾದ ಮುರಕ್ಕಿ ಪದ್ಮಮ್ಮರವರು ನೆರವೇರಿಸಿದರು. ಪ್ರಸ್ತುತ ದಿನಗಳಲ್ಲಿ ಸಂಸ್ಕೃತಿ,ಸಂಸ್ಕಾರಗಳು ನಶಿಸುತ್ತಿರುವ ಕಾರಣ ಬದುಕು ಅಸ್ತವ್ಯಸ್ತಗೊಳ್ಳುತ್ತಿದೆ.ಕುಟುಂಬಗಳು ಛಿದ್ರವಾಗುತ್ತಿವೆ.ಅನಾರೋಗ್ಯ ಹೆಚ್ಚುತ್ತಿದೆ.ದುಡುಮೆಯ ಬಹುಪಾಲು ಆಸ್ಪತ್ರೆ,ಔಷದಿಗಳಿಗೆ ವಿನಿಯೋಗಿಸುವಂತಹ ಪರಿಸ್ಥಿತಿಗೆ ನಮ್ಮ ಅಡುಗೆಯಲ್ಲಿ ಬದಲಾವಣೆ,ಆಧುನಿಕ ಆಹಾರಪದ್ದತಿಯ ಪರಿಣಾಮ ಎಂಬ ಕುರಿತು ಅರಿಯಲು ಇಂತಹ ಕಾರ್ಯಕ್ರಮಗಳಿಂದ ಮಾತ್ರ ಸಾಧ್ಯ ಎಂದರು. ಔಷದಿಯುಕ್ತ ಸಾತ್ವಿಕ,ಶುದ್ಧ ಮಲೆನಾಡಿನ ಸಾಂಪ್ರದಾಯಿಕ ಆಹಾರ ಪದ್ದತಿ ಮರುಕಳಿಸಬೇಕು.ಕುಟುಂಬದ ಆರೋಗ್ಯ,ಸೌಹಾರ್ದತೆ ವೃದ್ದಿಸಬೇಕು.ಸಮುದಾಯದ ಸಂಘಟನೆಯ ಮೂಲಕ ಸಮಾಜಮುಖಿ ಕಾರ್ಯಗಳ ಜೊತೆಗೆ ಧಾರ್ಮಿಕ,ಕ್ರೀಡಾ,ಸಾಂಸ್ಕೃತಿ ಚಟುವಟಿಕೆಗಳ ಕ್ರಿಯಾಶೀಲತೆ ಹೊಸಬಾಷ್ಯ ಬರೆಯುವಂತಾಗಬೇಕು ಎಂದು ಆಶಿಸಿದರು. ಮಹಿಳೆಯರ ಆರೋಗ್ಯ ಜಾಗೃತಿಯ ಕುರಿತು ಡಾ.ದೀಪಾ ಮಾತನಾಡಿ ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಡುತ್ತಿರುವ ಆರೋಗ್ಯ ಸಮಸ್ಯೆ ಎಂದರೇ ಪಿಸಿಓಡಿ ಹಾರ್ಮೋನ್ ಸಂಬಂದಿತ ಸಮಸ್ಯೆಯಾಗಿದೆ. ಈ ಕಾಯಿಲೆ ನಮ್ಮ ಆಧುನಿಕ ಶೈಲಿಯ ಅಪೌಷ್ಠಿಕ ಆಹಾರದ ಪರಿಣಾಮ ಬಾದಿಸುತ್ತಿರುವ ಸಮಸ್ಯೆಯಾಗಿದೆ ಎಂದರು. ಪ್ರಸ್ತುತ ಮಕ್ಕಳು ,ಯುವತಿಯರು,ಮಹಿಳೆಯರು ಮನೆ ಊಟ,ತಿಂಡಿ ತಿನಿಸುಗಳಿಗಿಂತ ಹೊರಗಿನ ಅಂಗಡಿ,ಹೊಟೇಲ್,ಸ್ಟಾಲ್‌ಗಳಲ್ಲಿ ದೊರೆಯುವ ಪಾಸ್ಟ್‌ಫುಡ್‌ಗಳು,ಜಿಂಕ್‌ಫುಡ್‌ಗಳು,ಗೋಬಿಮಂಚೂರಿ,ಪಿಜ್ಜಾಗಳಂತಹ ಆಹಾರಕ್ಕೆ ಹೆಚ್ಚು ಆಕರ್ಷಿತರಾಗಿ ಸೇವಿಸುವುದರಿಂದ ಮಹಿಳೆಯರ ಋತುಚಕ್ರದ ಪ್ರಕ್ರಿಯೆಗಳಲ್ಲಿ ಬಹುಬೇಗ ವ್ಯತ್ಯಾಸವಾಗುತ್ತದೆ.ಹೊಟ್ಟೆ ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.ಸಮಯಕ್ಕಿಂತ ಮುಂಚಿತವಾಗಿ ಅಥವಾ 2-3 ತಿಂಗಳುಗಳ ವಿಳಂಬವಾಗಿ ಋತುಸ್ರಾವ ಪ್ರಕ್ರಿಯೆ ನಡೆಯುವುದರಿಂದ ಅನಾರೋಗ್ಯದ ಲಕ್ಷಣ ಹೆಚ್ಚುತ್ತದೆ ಎಂದು ಎಚ್ಚರಿಸಿದರು. ಮಹಿಳೆಯರು ಆರೋಗ್ಯದ ಸಮಸ್ಯೆ ಕಾಣಿಸಿಕೊಂಡ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿದರೇ ಔಷದಿಗಿಂತಲು ಕ್ರಮಬದ್ದ ಆಹಾರದ ಕುರಿತು ಸಲಹೆ ನೀಡಬೇಕಾಗುತ್ತದೆ.ಮನೆಯಲ್ಲಿ ತೆಯಾರಿಸಿದ ಶುದ್ದ ಆಹಾರ ಪದ್ದತಿಯನ್ನು ಅಳವಡಿಸಿಕೊಳ್ಳುವುದರಿಂದ ಮಹಿಳೆಯರ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತದೆ. ಜಿಂಕ್‌ಫುಡ್ ಸೇವನೆಯ ಪರಿಣಾಮ ಹೆಣ್ಣುಮಕ್ಕಳ ಋತುಸ್ರಾವ ೧೩ ವರ್ಷಗಳಿಂದ ಆರಂಭವಾಗುವ ಬದಲಿಗೆ 8-9 ವರ್ಷದಲ್ಲಿಯೇ ಆರಂಭವಾಗುತ್ತಿರುವುದು ಉತ್ತಮ ಲಕ್ಷಣವಲ್ಲ ಎಂದರು. ಹೆಣ್ಣುಮಕ್ಕಳ ವಿವಾಹ 20 ರಿಂದ 28 ವರ್ಷಗಳ ಅವಧಿಯಲ್ಲಿ ನಡೆದರೇ ಸಂತಾನೋತ್ಪತ್ತಿ ಪ್ರಕ್ರಿಯೆ ಅತ್ಯಂತ ಉತ್ತಮವಾಗಿ ನಡೆಯುತ್ತದೆ.ಮಹಿಳೆಯರ ವಯಸ್ಸು 30 ದಾಟಿದ ನಂತರ ಹಂತಹಂತವಾಗಿ ಆರೋಗ್ಯಕರ ಸಂತಾನೋತ್ಪತ್ತಿಯ ಶಕ್ತಿ ಕ್ಷೀಣಿಸುತ್ತದೆ ಎಂದು ಸಭಿಕರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಮಹಿಳೆಯರು,ಮಕ್ಕಳು ಸಾಂಪ್ರದಾಯಿಕ ಸಾತ್ವಿಕ ಸತ್ವಯುತ ಮನೆ ಅಡುಗೆ ಸೇವಿಸುವ ಮೂಲಕ ಆರೋಗ್ಯವಂತ ದೈಹಿಕ,ಮಾನಸಿಕ ಸದೃಡತೆಯನ್ನು ಹೊಂದಬೇಕು.ಮನೆ ಅಡುಗೆಯಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ.ಜೀವನ ಕ್ರಮದಲ್ಲಿ ಆರೋಗ್ಯಕರ ಶಿಸ್ತುಪಾಲನೆ ಅಗತ್ಯ.ಸಮಯಕ್ಕೆ ಸರಿಯಾಗಿ ನಿಯಮಾನುಸಾರ ಆಹಾರ,ನಿದ್ರೆ,ಯೋಗ ಅಳವಡಿಸಿಕೊಂಡಲ್ಲಿ ಆರೋಗ್ಯಕರ ಸಮಾಜದ ನಿರ್ಮಾಣ ಸಾಧ್ಯ ಎಂದು ಸಲಹೆ ನೀಡಿದರು. ಮಲೆನಾಡ ಅಡುಗೆ ಹಬ್ಬಕ್ಕೆ ಸಾಗರದ ಖ್ಯಾತ ಪ್ರಸೂತಿ ತಜ್ಞೆ ಡಾ.ಮಾಲಿನಿರಾಜೇಂದ್ರಪ್ರಸಾದ್ ಚಾಲನೆ ನೀಡಿ ಪ್ರತಿಕ್ರಿಯಿಸಿ ಸಾಂಪ್ರದಾಯಿಕ ಸಾತ್ವಿಕ ಆಹಾರ ಸೇವಿಸುವುದರಿಂದ ವೈದ್ಯರ ಕೆಲಸವನ್ನು ಕಡಿಮೆ ಮಾಡಬಹುದು.ಕುಟುಂಬದ ಆರೋಗ್ಯದ ಜೊತೆಗೆ ವೈದ್ಯಕೀಯ ವೆಚ್ಚವಾಗದಂತೆ ಆರ್ಥಿಕ ಉಳಿತಾಯವು ಸಾಧ್ಯ,ಇಂತಹ ಗ್ರಾಮೀಣ ಆಹಾರ ಮೇಳ ಅತ್ಯಂತ ಆರೋಗ್ಯಕರ ಕಾರ್ಯಕ್ರಮ ಎಂದು ಶ್ಲಾಘಿಸಿದರು. ವೇದಿಕೆಯಲ್ಲಿ ವೀರರಾಣಿ ಚನ್ನಬೈರಾದೇವಿ ಜಿಲ್ಲಾ ಜೈನ ಸಂಘಟನೆಅಧ್ಯಕ್ಷೆ ಜ್ಯೋತಿನೇಮಿರಾಜ್ ಅಧ್ಯಕ್ಷತೆವಹಿಸಿ ಮಾತನಾಡಿ ನಮ್ಮ ಮಹಿಳಾ ಸಂಘಟನೆ ಆರಂಭವಾಗಿ 3 ತಿಂಗಳುಗಳಲ್ಲಿ ಇದು ಅತ್ಯಂತ ಭರವಸೆಯ ಕಾರ್ಯಕ್ರಮ ಆಯೋಜಿಸಿದ್ದೇವೆ ಎಂದರು. ಸಮಾಜದ ಹಿರಿಯರು,ಪ್ರಜ್ಞಾವಂತರ ಸಲಹೆ ಸಹಕಾರದೊಂದಿಗೆ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳವರ ಶುಭ ಆರ್ಶಿವಾದದಿಂದ ಸಮಾಜಮುಖಿ ಸಾಂಸ್ಕೃತಿಕ,ಕ್ರೀಡಾ ಚಟುವಟಿಕೆಗಳ ಮೂಲಕವೇ ಸಂಘಟನಾಶಕ್ತಿ ವೃದ್ದಿಸಬೇಕಿದೆ.ಧಾರ್ಮಿಕ ಪ್ರವಾಸ ಪುಣ್ಯಕ್ಷೇತ್ರ ಬಿಹಾರ ರಾಜ್ಯದಲ್ಲಿನ ಶಿಖರಜಿ ತೀರ್ಥಯಾತ್ರೆಯನ್ನು ಬೆಂಗಳೂರಿನ ಸುಹಾಸ್ತಿ ಜೈನ್‌ಮಿಲನ್ ಆಶ್ರಯದಲ್ಲಿ ಯೋಜಿಸಿ 3000 ಜನರನ್ನು ಕರೆದುಕೊಂಡು ಹೋಗಿ ಭಜನೆ ಪ್ರಾರ್ಥನೆ ನಡೆಸಲು ಕಾರ್ಯಕ್ರಮ ಆಯೋಜಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಪದ್ಮಶ್ರೀಶಾಂತರಾಜ ಮುಪ್ಪಾನೆ, ಪಾರ್ಶ್ವನಾಥ ಇಂದ್ರ ಕರೂರು, ಸನತ್‌ಕುಮಾರ್ ಪಾಟೀಲ್,ಸನತ್‌ಕುಮಾರ್ ಪಾಟೀಲ್ ಬೆಳಗಾವಿ,ಶಾಂತರಾಜ್ ಜೈನ್ ಮುಪ್ಪಾನೆ ಅಭಿನಂದನ್‌ಜೈನ್ ಬ್ಯಾಕೋಡು, ಎಸ್.ವಿ.ಹಿತಕರ ಜೈನ್ ,ಮಂಜಯ್ಯ ಜೈನ್ ಸಂಸೆ, ಚಂದ್ರಕಲಾರಾಜಕುಮಾರ್ ಜೈನ್, ಸವಿತಾದೇವರಾಜ್,ಲೋಕರಾಜ್ ಜೈನ್ ವಳಗೆರೆ,ನವೀನ್ ಜೈನ್ ದಾರಿಗದ್ದೆ,ದೇವರಾಜ್ ಕಪದೂರು,ಅನಿಲ್ ಜೈನ್ ಕುದರೂರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಜೈನ ಸಮುದಾಯದ ಸಾಂಪ್ರದಾಯಿಕ ಅಡುಗೆಯಿಂದ 7-8 ದಶಕಗಳವರೆಗೂ ಕುಟುಂಬವನ್ನು ಆರೋಗ್ಯಕರವಾಗಿ ನಿರ್ವಹಿಸಿದ ಹಿರಿಯರಾದ ಆದಮ್ಮ ತಾರೋಡಿ,ಪದ್ಮಮ್ಮ ಮುರಕ್ಕಿ,ನಾಗಮ್ಮ ಜೀಗೆರೆ,ಜಯಮ್ಮ ತಾರೋಡಿ ಇವರುಗಳನ್ನು ಸನ್ಮಾನಿಸಿ ಗೌರವಿಸುವ ಮೂಲಕ ಸಾಂಪ್ರದಾಯಿಕ ಅಡುಗೆ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕು ಎಂದು ವೀರರಾಣಿ ಚನ್ನಬೈರಾದೇವಿ ಜಿಲ್ಲಾ ಜೈನ ಸಂಘಟನೆಯಿಂದ ಸನ್ಮಾನಿಸಿ ಗೌರವಿಸಿದರು. ನಂತರ ಮಹಿಳೆಯರಿಗೆ ಸಂಗೀತ ಖುರ್ಚಿ(ಮೂಸಿಕಲ್‌ಛೇರ್) ಕ್ರೀಡೆ ನಡೆಸಲಾಯಿತು. ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಮತ್ತು ಪುರುಷರುಗಳಿಗೆ ರಸಪ್ರಶ್ನೆ ಕಾರ್ಯಕ್ರಮ ನಡೆಸಲಾಯಿತು. ವೀರರಾಣಿ ಚನ್ನಬೈರಾದೇವಿ ಜಿಲ್ಲಾ ಜೈನ ಸಂಘಟನೆಸದಸ್ಯರು ಪ್ರಾರ್ಥಿಸಿದರು. ರೋಹಿಣಿ ಪ್ರಶಾಂತ್ ರವರು ಸ್ವಾಗತಿಸಿ, ಕವಿತಾ ಜೈನ್ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮಲೆನಾಡ ಅಡುಗೆ ಹಬ್ಬದಲ್ಲಿ ವಿವಿಧ ಬಗೆ ಬಗೆಯ 75 ಮಾದರಿ ಆಹಾರ ತೆಯಾರಿಸಿ ಕಾರ್ಯಕ್ರಮಕ್ಕೆ ಆಗಮಿಸಿರುವ ಎಲ್ಲರಿಗೂ ಉಣಬಡಿಸಿದರು.ಗೊಜ್ಜು,ತಂಬುಳಿ,ಪಲ್ಯ,ಸಿಹಿ ಉಂಡೆಗಳು,ಹೋಳಿಗೆ ಪಾಯಿಸ ಸೇರಿದಂತೆ ವರ್ಣಿಸಲು ಅಸಾಧ್ಯವಾದಷ್ಟು ಆಹರ ಪದಾರ್ಥಗಳ ನೋಡಿದ ಸಭಿಕರು ಮೂರು ದಿನವಾದರೂ ಇಷ್ಟೊಂದು ಬಗೆಯ ಆಹಾರ ಸೇವಿಸಲು ಕಷ್ಟವಾಗುತ್ತದೆ ಎಂದು ಅಬಿಪ್ರಾಯಿಸಿದರು.ಹೊಟ್ಟೆತುಂಬ ತಿಂದು ಉಂಡು ಬಾಳೆಹಣ್ಣು ತಿಂದು ತೃಪ್ತಿಯಿಂದ ತೆರಳಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img