ಎಕ್ಸಲೆಂಟ್: ನೀಟ್ ಸಾಧಕರ ಸನ್ಮಾನ ಸಮಾರಂಭ


Logo

Published Date: 27-Jul-2026 Link-Copied

ಮೂಡುಬಿದಿರೆ: ವಿದ್ಯಾರ್ಥಿಯ ಸಾಮರ್ಥ್ಯವನ್ನು ಕೇವಲ 10ನೇ ತರಗತಿಯ ಅಂಕಗಳಿಂದ ಅಳೆಯಲು ಸಾಧ್ಯವಿಲ್ಲ. ಸೂಕ್ತ ಮಾರ್ಗದರ್ಶನ, ಶಿಸ್ತುಬದ್ಧ ಶಿಕ್ಷಣ ವ್ಯವಸ್ಥೆ ಹಾಗೂ ನಿರಂತರ ಪ್ರೋತ್ಸಾಹ ದೊರೆತರೆ ಸಾಮಾನ್ಯ ವಿದ್ಯಾರ್ಥಿಯೂ ರಾಷ್ಟ್ರೀಯ ಮಟ್ಟದ ಸಾಧಕನಾಗಬಹುದು ಎಂದು ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಹೇಳಿದರು. ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಜಸಭಾಂಗಣದಲ್ಲಿ ನಡೆದ 500ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ನೀಟ್ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿಶಿಷ್ಟ ಗುರುಕುಲ ಮಾದರಿಯ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳ ಬದುಕಿನಲ್ಲಿ ಅಸಾಧಾರಣ ಪರಿವರ್ತನೆಯನ್ನು ತಂದಿದೆ ಎಂದು ಹೇಳಿದರು. ತಮ್ಮ ಮಾತಿಗೆ ಉದಾಹರಣೆ ನೀಡಿದ ಅವರು, 600 ಕ್ಕೂ ಹೆಚ್ಚು ಅಂಕ ಗಳಿಸಿದ ಏಳು ವಿದ್ಯಾರ್ಥಿಗಳಲ್ಲಿ 10ನೇ ತರಗತಿಯಲ್ಲಿ ಕೇವಲ 75% ಅಂಕಗಳನ್ನು ಪಡೆದ ವಿದ್ಯಾರ್ಥಿಯೊಬ್ಬರು ನೀಟ್ ಪರೀಕ್ಷೆಯಲ್ಲಿ 580 ಅಂಕಗಳನ್ನು ಗಳಿಸಿದ್ದು, ಮತ್ತೋರ್ವ ವಿದ್ಯಾರ್ಥಿ 80% ಅಂಕಗಳೊಂದಿಗೆ ಎಸ್‌ಎಸ್‌ಎಲ್‌ಸಿ ಪಾಸಾಗಿ ನೀಟ್ ಪರೀಕ್ಷೆಯಲ್ಲಿ 611 ಅಂಕಗಳನ್ನು ಗಳಿಸಿದ್ದಾನೆ. “ಇಂತಹ ಅದ್ಭುತ ಪರಿವರ್ತನೆಗಳು ಎಕ್ಸಲೆಂಟ್‌ನಲ್ಲಿ ಮಾತ್ರ ಸಾಧ್ಯ. ನಾವು ವಿದ್ಯಾರ್ಥಿಗಳ ಹಿಂದಿನ ಅಂಕಗಳನ್ನು ನೋಡುವುದಿಲ್ಲ; ಅವರೊಳಗಿನ ಸಾಮರ್ಥ್ಯವನ್ನು ಗುರುತಿಸಿ ಅದನ್ನು ಸಾಧನೆಯಾಗಿ ರೂಪಿಸುವ ಕೆಲಸ ಮಾಡುತ್ತೇವೆ,” ಎಂದು ಅವರು ಹೇಳಿದರು. ಇತ್ತೀಚೆಗೆ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ಐಐಟಿಗೆ ಹಾಗೂ ಮೂವರು ವಿದ್ಯಾರ್ಥಿಗಳು ಎನ್‌ಐಟಿಕೆ ಸುರತ್ಕಲ್‌ಗೆ ಆಯ್ಕೆಯಾಗಿರುವುದು ಸಂಸ್ಥೆಯ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ ಎಂದ ಅವರು, ಎಐಐಎಂಎಸ್‌, ಐಐಟಿ, ಎನ್‌ಐಟಿ ಹಾಗೂ ದೇಶದ ಪ್ರತಿಷ್ಠಿತ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಸಂಸ್ಥೆಗಳಿಗೆ ಎಕ್ಸಲೆಂಟ್ ವಿದ್ಯಾರ್ಥಿಗಳು ಸೇರುವ ಪರಂಪರೆ ನಿರಂತರವಾಗಿ ಮುಂದುವರೆದಿದೆ ಎಂದು ತಿಳಿಸಿದರು. ಪದವಿಪೂರ್ವ ಶಿಕ್ಷಣದ ಫಲಿತಾಂಶವನ್ನು ಉಲ್ಲೇಖಿಸಿದ ಯುವರಾಜ್ ಜೈನ್, “ಈ ವರ್ಷದ ಪಿಯುಸಿ ಬ್ಯಾಚ್‌ಗೆ ಪ್ರವೇಶ ಪಡೆದಾಗ ಎಸ್‌ಎಸ್‌ಎಲ್‌ಸಿಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದ ವಿದ್ಯಾರ್ಥಿಗಳ ಸಂಖ್ಯೆ ಸುಮಾರು 200+ ಆಗಿತ್ತು. ಆದರೆ ಎರಡು ವರ್ಷಗಳ ನಂತರ ಪಿಯುಸಿ ಫಲಿತಾಂಶದಲ್ಲಿ ಸುಮಾರು 1,000 ವಿದ್ಯಾರ್ಥಿಗಳ ಪೈಕಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದಿದ್ದಾರೆ. ಇದೇ ನಿಜವಾದ ಶಿಕ್ಷಣದ ಯಶಸ್ಸು ಎಂದ ಅವರು ಸಂಸ್ಥೆಯ ಶಿಕ್ಷಣ ವ್ಯವಸ್ಥೆ ಹಾಗೂ ಶಿಸ್ತುಬದ್ದ ನಿಯಮಗಳಿಗೆ ಪೋಷಕರು ಕೊಡುವ ಸಹಕಾರ ಮತ್ತು ಪ್ರೀತಿಯ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಶ್ಮಿತಾ ಯುವರಾಜ್ ಜೈನ್, ವಿದ್ಯಾರ್ಥಿಗಳ ಅದ್ಭುತ ಸಾಧನೆಯ ಹಿಂದೆ ಅವರ ಪರಿಶ್ರಮದ ಜೊತೆಗೆ ಶಿಕ್ಷಕರ, ಬೋಧಕೇತರ ಸಿಬ್ಬಂದಿ ಹಾಗೂ ಸಂಪೂರ್ಣ ಶೈಕ್ಷಣಿಕ ತಂಡದ ಸಮರ್ಪಿತ ಸೇವೆಯೂ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ವಿದ್ಯಾರ್ಥಿಗಳಾದ ನಿಖಿಲ್ ಎಸ್. ಎಸ್ (650) , ತನ್ಮಯ್ ಎ. ಕೋಟಿ (647), ಚಿನ್ಮಯ್ ಜಿ. ಬೆಳ್ಳೂರು (629), ಹೇಮ ಯು. (620), ಈಶ್ವರ್ ಪುಂಡಲೀಕಪ್ಪ ಕೊಪ್ಪಳ (612), ಮೋಹಿತ್ ವೈ. ಪಿ.(611), ರಚನಾ ಎಸ್. ಎಮ್., ಜಗದೀಶ್ ಅಪ್ಪಯ್ಯಪ್ಪ, ಸಮೀಕ್ಷಾ ಎಮ್. ಎಸ್., ಯಶವಂತ್ ಕೆ., ಆದಿತ್ಯ ಬಾಬಾಸಾಬ್ ಚೌಗಲೆ, ನಿಶ್ಚಯ್ ಎಮ್., ಚೇತನ್ ಜಿ. ರಾಘವ್, ರಾಹುಲ್ ಪಿ. ಗೌಡ, ಗುರುಚರಣ್ ಎಮ್. ಶೆಟ್ಟಿ, ಪ್ರಣವ್ ಗೌಡ ಐ. ಎಸ್., ಸಂಕೀರ್ತನ್ ಕಟ್ಟಾ, ಮನನ್ ಎಸ್. ಗೌಡ, ಸಮರ್ಥ್ ಕೆ. ಎಸ್., ಶೋಧನ್ ಎಮ್. ಎಸ್., ಪೂರ್ವಿಕ ಆರ್., ಶ್ಯಾಮ್‌ಕಲ್ಯಾಣ್ ಬೆಣ್ಣೂರ್, ಮನೀತ್, ಅಮೂಲ್ಯ ಶಂಕರ್ ಮಿರ್ಜಿ, ತೇಜಲ್ ಎಸ್. ಸ್ವಾಮಿ, ಸಮರ್ಥ್ ಎಸ್., ಆದಿತ್ ರಾಜ್ ಎ., ಸಮೀರ ಎಮ್. ಆಚಾರ್ಯ, ಹಿಮವಂತ್ ಪಿ., ಕೋಮಲ ಎಸ್. ಕೆ., ನಿಹಾಲ್, ತರುಣಿಕಾ ಎಸ್., ಹಾಗೂ ವಿಸ್ಮಯ ವಿ. ಗೌಡ. ಅವರೆಲ್ಲರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿದ್ಯಾರ್ಥಿ ಚಿನ್ಮಯ್ ಜಿ. ಬೆಳ್ಳೂರು, "ಎಕ್ಸಲೆಂಟ್ ಸಂಸ್ಥೆಯಲ್ಲಿ ಶಿಕ್ಷಣ ಮತ್ತು ಶಿಸ್ತಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಎಲ್ಲಾ ಕಟ್ಟುನಿಟ್ಟಿನ ಕ್ರಮಗಳು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಕಾರಣವಾಗಿದೆ ಎಂದು ಹೇಳಿದರೆ, ವಿದ್ಯಾರ್ಥಿನಿ ತನ್ಮಯಿ ಎಂ ಕೋಟಿ ಕಾಲೇಜಿನಲ್ಲಿ ನಡೆಸುವ ಯೋಗ, ಧ್ಯಾನ ಮತ್ತಿತರ ಚಟುವಟಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಸಹಾಯಕವಾಗಿದೆ ಎಂದು ಹೇಳಿದರು. ವಿದಾರ್ಥಿಗಳು ಪೋಷಕರಾದ ಸತೀಶ್ ಕುಮಾರ್ ಮಾತನಾಡಿ, ಕಾಲೇಜಿನ ಎಲ್ಲ ಮಕ್ಕಳ ಶೈಕ್ಷಣಿಕ ಸಾಧನೆಗೆ ಹಾಗೂ ಶಿಸ್ತು, ಸಂಸ್ಕಾರ ಕಲಿಸಿಕೊಡುವ ಕಾರ್ಯಗಳಿಗೆ ಎಕ್ಸಲೆಂಟ್ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ನೀಟ್ ಸಂಯೋಜಕ ರಾಮಮೂರ್ತಿ, ತೇಜಸ್ವಿ ಭಟ್, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೀಟ್ ಪರೀಕ್ಷೆಯಲ್ಲಿ 500ಕ್ಕೂ ಅಧಿಕ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಪುಷ್ಪರಾಜ್ ಸ್ವಾಗತಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ಕಾರ್ಯಕ್ರಮವನ್ನು ನಿರೂಪಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img