ಮೂಡಬಿದ್ರೆ,ಕಲ್ಲಬೆಟ್ಟು: ವಿಜ್ಞಾಪನಾ ಪತ್ರ ಬಿಡುಗಡೆ
Published Date: 08-Jun-2026 Link-Copied
ಶ್ರೀ ಗಣೇಶ ಸೇವಾ ಟ್ರಸ್ಟ್ (ರಿ.) ಕಲ್ಲಬೆಟ್ಟು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ಸ್ವರ್ಣಗೌರಿ ಮಾತೃ ಮಂಡಳಿಯ ಜಂಟಿ ಸಭೆಯು ಕಲ್ಲಬೆಟ್ಟು ಭಜನಾ ಮಂದಿರದಲ್ಲಿ ಜರಗಿತು. ಶ್ರೀ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ರಾಜೇಶ್ ಬೈಲೂರು, ಕಾರ್ಯದರ್ಶಿಯಾಗಿ ಪ್ರಮೋದ್ ಆಚಾರ್ಯ ಮಾರೂರು ಮತ್ತು ಇತರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟಿನ ಅಧ್ಯಕ್ಷರಾದ ಎಂ ಬಾಹುಬಲಿ ಪ್ರಸಾದ್ ವಹಿಸಿ ನೂತನ ಕಟ್ಟಡದ ನೀಲ ನಕಾಶೆ ವಿವರ ನೀಡಿ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ ಎಲ್ಲರ ಸಹಕಾರವನ್ನು ಕೋರಿದರು. ಗಣೇಶೋತ್ಸವ ಸಮಿತಿಯು 24 ವರ್ಷ ಪೂರೈಸಿ ಬೆಳ್ಳಿ ಹಬ್ಬ ಆಚರಿಸುವ ಸಂಭ್ರಮದಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕೆಂದು ವಿನಂತಿಸಿಕೊಂಡರು. ಟ್ರಸ್ಟಿನ ಸ್ಥಾಪಕ ಅಧ್ಯಕ್ಷರು ಶ್ರೀಪತಿ ಭಟ್ ಕಳೆದ 24 ವರ್ಷದ ಕಾರ್ಯಕರ್ತರ ಸೇವೆಯನ್ನು ಸ್ಮರಿಸಿಕೊಂಡರು. ಟ್ರಸ್ಟಿನ ನಿಕಟಪೂರ್ವ ಅಧ್ಯಕ್ಷ ಶಿಕಾರಿಪುರ ಈಶ್ವರ ಭಟ್ ಟ್ರಸ್ಟಿನ ಉದ್ದೇಶ ಮತ್ತು ಜನಪರ ಕಾಳಜಿ ಬಗ್ಗೆ ಕಾರ್ಯಕ್ರಮಕ್ಕೆ ಒತ್ತು ಕೊಡಬೇಕೆಂದು ಕರೆನೀಡಿದರು. ಟ್ರಸ್ಟಿಗಳಾದ ಪದ್ಮಯ್ಯ ಸುವರ್ಣ, ಕೇಶವ ಹಗ್ಡೆ, ರಮೇಶ್‌ಚಂದ್ರ ಪಿ, ಸುಧೀರ್ ಪೈ, ಕರುಣಾಕರ್ ಶೆಟ್ಟಿ, ಯೋಗಿಶ್ ಪೈ, ಕೃಷ್ಣಪ್ಪ, ರಂಜಿತ್ ಪಿ, ಗಣೇಶೋತ್ಸವ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಸತೀಶ್ ಶೆಟ್ಟಿ, ಕಾರ್ಯದರ್ಶಿ ವಿಶಾಲ್ ಮಾರೂರು, ಸ್ವರ್ಣಗೌರಿ ಮಾತೃ ಮಂಡಳಿಯ ಅಧ್ಯಕ್ಷೆ ಪ್ರಿಯಾಂಕ ಬರ್ಮನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಖಜಾಂಜಿ ರೋಹನ್ ಬಂಗೇರ ಸ್ವಾಗತಿಸಿದರು. ವಿಜೇಶ್ ಧನ್ಯವಾದವಿತ್ತರು. ಜಿ.ಕೆ ಭಟ್ ಕಾರ್ಯಕ್ರಮ ನಿರೂಪಿಸಿದರು.