ಮೂಡುಬಿದಿರೆ : ಜೈನ್ ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ ರಕ್ತದಾನ, ಕೇಶದಾನ ಶಿಬಿರ
Published Date: 29-Jan-2024 Link-Copied
ಮೂಡುಬಿದಿರೆ: ಐ.ಸಿ.ವೈ.ಎಂ. ಮೂಡಬಿದಿರೆ, ರೋಟರಿ ಕ್ಲಬ್ ಮೂಡಬಿದಿರೆ ಟೆಂಪಲ್ ಟೌನ್ ಹಾಗೂ ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್ ಜ್ಯೋತಿ ನಗರ ಇವರ ಸಹಯೋಗದಲ್ಲಿ ರಕ್ತದಾನ ಹಾಗೂ ಕೂದಲು ದಾನ ಶಿಬಿರವು ಜ. 26ರಂದು ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್‌ನಲ್ಲಿ ನಡೆಯಿತು. ಮಂಗಳೂರು ಫಾದರ್ ಮುಲ್ಲರ್ ಹಾಸ್ಪಿಟಲ್‌ನ ತಜ್ಞರಿಂದ 62 ಬ್ಲಡ್ ಯೂನಿಟ್ಸ್ ಸಂಗ್ರಹಿಸಲಾಯಿತು. ಕ್ಯಾನ್ಸರ್ ಪೀಡಿತ ಜನರಿಗೆ ಕೂದಲಿನ ವಿಗ್ ಅವಶ್ಯವಿರುವ ದೃಷ್ಟಿಯಿಂದ 8 ಜನ ಹೆಣ್ಣುಮಕ್ಕಳು ತಮ್ಮ ಉದ್ದದ ಕೂದಲನ್ನು ದಾನ ಮಾಡಿದರು. ಕಾರ್ಪಸ್ ಕ್ರಿಸ್ಟಿ ಚರ್ಚಿನ ಧರ್ಮಗುರು ರೆ.ಫಾ. ಓನಿಲ್ ಡಿʼಸೋಜ ಕಾರ್ಯಕ್ರಮ ಉದ್ಘಾಟಿಸಿದರು. ಜೈನ್ ಮೆಡಿಕಲ್ ಸೆಂಟರ್ ಹಾಸ್ಪಿಟಲ್ ಡಾ. ಮಹಾವೀರ ಜೈನ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು. ರೋಟರಿ ಅಧ್ಯಕ್ಷ ರೋನಾಲ್ಡ್ ಫೆರ್ನಾಂಡಿಸ್ ಐಸಿವೈಎಂನ ಅಧ್ಯಕ್ಷ ರೂಬೆನ್, ಮಿಚೆಲ್ ಡಿಸೋಜಾ ಜೈನ ಮೆಡಿಕಲ್ ಸೆಂಟರ್ ವೈದ್ಯಾಧಿಕಾರಿ ಡಾ. ಪ್ರಣಮ್ಯ ಜೈನ್, ದಿ. ಗ್ರೇಸನ್ ರೋಡ್ರಿಗಸ್ ಅವರ ತಂದೆ ಲಿಯೋ ರೋಡ್ರಿಗಸ್, ಐ.ಸಿ.ವೈ.ಎಂ. ಮೂಡುಬಿದಿರೆ ಸುವರ್ಣ ಮಹೋತ್ಸವದ ಸಂಚಾಲಕ ವಿನ್ಸೆಂಟ್ ಮಸ್ಕರೇನಸ್, ಐ.ಸಿ.ವೈ.ಎಂ. ಎನಿಮೇಟರ್ ರೊ. ಕೇವಿನ್ ಡಿಸೋಜ, ರೋಯ್‌ಸ್ಟನ್ ಪಿಂಟೊ ಉಪಸ್ಥಿತರಿದ್ದರು. ರೂಬನ್ ಸ್ವಾಗತಿಸಿದರು. ಡಿವಿಟಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಗ್ಯಾಲ್ವಿನ್ ವಂದಿಸಿದರು.