ಸತ್ತೂರು, ಧಾರವಾಡ: ಡೇಟಾ ಟು ಡಿಸಿಷನ್ - ಒಂದು ದಿನದ ಕಾರ್ಯಾಗಾರ


Logo

Published Date: 07-Aug-2025 Link-Copied

ಎಸ್.ಡಿ.ಎಂ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೂಕ್ಷ್ಮಾಣು ಜೀವಶಾಸ್ತ್ರ ವಿಭಾಗವು, ಭಾರತೀಯ ವೈದ್ಯಕೀಯ ಸೂಕ್ಷ್ಮಾಣು ಜೀವಶಾಸ್ತ್ರಜ್ಞರ ಸಂಘ, ಕರ್ನಾಟಕ ರಾಜ್ಯ ಘಟಕದ ಸಹಯೋಗದೊಂದಿಗೆ "ಡೇಟಾ ಟು ಡಿಸಿಷನ್" ಒಂದು ದಿನದ ನಿರಂತರ ಕಲಿಕಾ ಕಾರ್ಯಾಗಾರವನ್ನು “ರೋಗ ನಿರೋಧಕದ ನೀತಿ ಮತ್ತು ವೈದ್ಯರ ಸಲಹೆಗೆ ಕೃತಕ ಬುದ್ಧಿಮತೆಯ ಮಾಹಿತಿ” ಎಂಬ ಧ್ಯೇಯೆಯೊಂದಿಗೆ ಏರ್ಪಡಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಮತ್ತು ಮುಖ್ಯ ಅತಿಥಿಯವರಾದ ಕೆ.ಎಲ್.ಇ ವಿಶ್ವವಿದ್ಯಾಲಯದ, ಜೆ.ಎನ್. ವೈದ್ಯಕೀಯ ಕಾಲೇಜಿನ ಸೂಕ್ಷಾö್ಮಣು ಜೀವವಿಜ್ಞಾನದ ಪ್ರಾಧ್ಯಾಪಕರು ಮತ್ತು ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞರ ಭಾರತೀಯ ಸಂಘದ ಅಧ್ಯಕ್ಷರಾದ ಡಾ. ಮಹಾಂತೇಶ್ ನಾಗಮೋತಿ ಮತ್ತಿತರ ಗಣ್ಯರು ಕಾರ್ಯಗಾರವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಸೂಕ್ಷ್ಮಾಣು ಜೀವಶಾಸ್ತ್ರಜ್ಞರು ಮತ್ತು ಇತರ ವೈದ್ಯಕೀಯ ವೃತ್ತಿಪರರು ಈ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಡಾ. ಆರ್.ಡಿ. ಕುಲಕರ್ಣಿ, ಹಿರಿಯ ಸೂಕ್ಷ್ಮ ಜೀವಶಾಸ್ತ್ರಜ್ಞ ಡಾ. ಶಾರೂನ್, ಡಾ. ಅಮಿತ್ ಜೋಶಿ, ಡಾ. ಸುಘೋಷ್ ಕುಲಕರ್ಣಿ ಮತ್ತಿತರರು ಈ ಕಾರ್ಯಾಗಾರದಲ್ಲಿ ತಜ್ಞ ಉಪನ್ಯಾಸ ನೀಡಿದರು. ಡಾ. ಮಹಾಂತೇಶ್ ನಾಗಮೋತಿ ಮತ್ತು ಸಾಕೇತ್ ಶೆಟ್ಟಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡುತ್ತಾ: ರೋಗ ನಿರೋಧಕ ಮಾತ್ರೆಗಳ ದುರುಪಯೋಗ ಮತ್ತು ಅತಿಯಾದ ಬಳಕೆಯನ್ನು ನಿಯಂತ್ರಿಸಬೇಕು. ಸೂಕ್ಷ್ಮಾಣು ಜೀವಶಾಸ್ತ್ರಜ್ಞರು ರೋಗ ನಿರೋಧಕಗಳ ತರ್ಕಬದ್ಧ ಬಳಕೆಯಲ್ಲಿ ಸದಾ ಮಾರ್ಗದರ್ಶನ ಮಾಡುತ್ತಾ ಮುಂದಾಳತ್ವ ವಹಿಸುತ್ತಾರೆ. ಎಐ ತಂತ್ರಜ್ಞಾನವು ವೈದ್ಯಕೀಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ತನ್ನ ಮಹತ್ತರ ಕೊಡುಗೆಯನ್ನು ನೀಡುತ್ತಿದೆ. ಎಐ ತಂತ್ರಜ್ಞಾನವು ಆರೋಗ್ಯ ವೃತ್ತಿಪರರ ಕಾರ್ಯಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ ಹೊರತು ವೃತ್ತಿಪರರಿಗೆ ಬದಲಿಯಾಗಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರಕ್ಕೆ ಎಐ ತಂತ್ರಜ್ಞಾನ ಪ್ರವೇಶಿಸಿದ್ದರಿಂದ ವೈದ್ಯರು ತಮ್ಮ ಜ್ಞಾನವನ್ನು ಉನ್ನತಿಕರಿಸಬೇಕಾದ ಅನಿವಾರ್ಯತೆಗಳಿವೆ. ಈ ಕಾರ್ಯಕ್ರಮದಲ್ಲಿ ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ, ಭಾರತೀಯ ವೈದ್ಯಕೀಯ ಸೂಕ್ಷ್ಮ ಜೀವಶಾಸ್ತ್ರಜ್ಞರ ಸಂಘ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರು ಹಾಗೂ ಯಾದಗಿರಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ನವಾಜ್ ಒಮರ್, ಸೂಕ್ಷ್ಮಾಣು ಜೀವಿ ಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘಟನಾ ಸಮಿತಿಯ ಅಧ್ಯಕ್ಷರಾದ ಡಾ. ಅಜಂತ್ ಜಿ.ಎಸ್. ಮತ್ತಿತ್ತರರು ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಕಾರ್ಯದರ್ಶಿಗಳಾದ ಡಾ. ಮಂಜುನಾಥ್ ಎಚ್, ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಾಗಾರದ ಮಹತ್ವವನ್ನು ತಿಳಿಸಿದರು. ಡಾ. ಪವಿತ್ರಾ ಜೈನ್ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶುಭದಾ ಸಿ. ವಂದನಾಪರ್ಣೆ ಸಲ್ಲಿಸಿದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img