Wed, Apr 30, 2025
ಹಿರಿಯ ವಕೀಲ, ಎನ್. ನೇಮಿರಾಜ್ ಶೆಟ್ಟಿ ನಿಧನ
ಬೆಳ್ತಂಗಡಿ ತಾಲೂಕಿನ ಹಿರಿಯ ವಕೀಲರು, ಪಡಂಗಡಿ ನಡಿಬೆಟ್ಟುಗುತ್ತು ನೇಮಿರಾಜ್ ಶೆಟ್ಟಿ (95ವ.) ಇಂದು (20-01-2024) ನಿಧನರಾಗಿದ್ದಾರೆ. ಪಡಂಗಡಿ, ಪೆರಣಮಂಜ ಶ್ರೀ ಮೂಜಿಲ್ನಾಯ ದೈವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾಗಿದ್ದ ಇವರು ಸುಮಾರು 50 ವರ್ಷಕ್ಕೂ ಮಿಕ್ಕಿ ವಕೀಲರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿದ್ದ ಇವರು ಬಿ.ಜೆ.ಪಿ.ಯ ಹಿರಿಯ ಧುರೀಣರಾಗಿದ್ದರು. ಅಲ್ಲದೆ ಬೆಳ್ತಂಗಡಿ ಕ್ಷೇತ್ರದಿಂದ ಜನಸಂಘ ಪಕ್ಷದಲ್ಲಿ ಶಾಸಕ ಸ್ಥಾನಕ್ಕೂ ಸ್ಪರ್ಧಿಸಿದ್ದರು. ಇವರು ಪತ್ನಿ ಪ್ರೇಮಾ, ಪುತ್ರಿಯರಾದ ವಾಣಿ ರಾಜೇಂದ್ರ ಕುಮಾರ್, ನ್ಯಾಯಾಧೀಶೆ ಉಷಾ ಶಶಿಕಾಂತ್ ಪ್ರಸಾದ್, ಸೌಮ್ಯ ರತನ್ ಕುಮಾರ್ ಮತ್ತು ಕುಟುಂಬ ವರ್ಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಇವರ ಹಿರಿಯ ಪುತ್ರ ಪ್ರಶಾಂತ್ ಕುಮಾರ್ ನಡಿಬೆಟ್ಟು ಕೆಲವು ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತರ ಅಂತಿಮ ಸಂಸ್ಕಾರವು ಇಂದು (20-01-2024) ಅಪರಾಹ್ನ 2 ಗಂಟೆಯ ನಂತರ ನಡಿಬೆಟ್ಟುಗುತ್ತುವಿನಲ್ಲಿ ನಡೆಯಲಿದೆ ಎಂದು ಮಾಹಿತಿ ಲಭ್ಯವಾಗಿದೆ.