Sat, Apr 26, 2025
ಫೆ.22: ವೇಣೂರು ಯುವಸೇವಾ ಸಂಗಮ ಟ್ರಸ್ಟ್ ವತಿಯಿಂದ ಸಾರ್ವಜನಿಕ ಅಂಬ್ಯುಲೆನ್ಸ್ ಲೋಕಾರ್ಪಣೆ
ಬೆಳ್ತಂಗಡಿ: ವೇಣೂರು ಯುವಸೇವಾ ಸಂಗಮ ಸೇವಾ ಟ್ರಸ್ಟ್ ವತಿಯಿಂದ ಸಾರ್ವಜನಿಕ ಅಂಬುಲೆನ್ಸ್ ಲೋಕಾರ್ಪಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಬೆಳ್ತಂಗಡಿ ತಾಲೂಕು ಅಮೆಚೂರು ಕಬಡ್ಡಿ ಆಸೋಸಿಯೇಶನ್, ತಾಲೂಕು ಯುವಜನ ಒಕ್ಕೂಟದ ಸಹಭಾಗಿತ್ವದಲ್ಲಿ 65 ಕೆ.ಜಿ. ವಿಭಾಗದ ಪ್ರೊ ಮಾದರಿ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಹಾಗೂ ಹಗ್ಗಜಗ್ಗಾಟ ಚಾಂಪಿಯನ್ ಶಿಪ್ ಪಂದ್ಯಾಟ ಫೆ. 22 ರಂದು ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಜೆ 3ಕ್ಕೆ ಕಬಡ್ಡಿ ಪಂದ್ಯಾಟ ಉದ್ಘಾಟನೆ, ಸಂಜೆ 6ರಿಂದ ಮಂಗಳೂರು ಸುದೇಶ್ ಕುಮಾರ್ ಜೈನ್ ಮಕ್ಕಿ ಮನೆ ಕಲಾ ವೃಂದದಿಂದ ಸಾಂಸ್ಕೃತಿಕ ವೈಭವ, ರಾತ್ರಿ 8 ಕ್ಕೆ ಸಭಾ ಕಾರ್ಯಕ್ರಮ ಹಾಗೂ ಅಂಬುಲೆನ್ಸ್ ಲೋಕಾರ್ಪಣೆ ನಡೆಯಲಿದ ಎಂದು ಸಮಿತಿ ಅಧ್ಯಕ್ಷ ಕೆ. ವಿಜಯ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.